Saturday, October 1, 2022
spot_img
Homeಸುದ್ದಿಕೊರೋನ ಬಳಿಕ ಜಗತ್ತನ್ನು ಕಾಡುತ್ತಿದೆ ಮಂಕಿಪಾಕ್ಸ್‌ ಸೋಂಕು

ಕೊರೋನ ಬಳಿಕ ಜಗತ್ತನ್ನು ಕಾಡುತ್ತಿದೆ ಮಂಕಿಪಾಕ್ಸ್‌ ಸೋಂಕು

  • ಕೇರಳದ ಕಣ್ಣೂರಿನಲ್ಲಿ ಎರಡನೇ ಪ್ರಕರಣ ಪತ್ತೆಯಾದ ಬಳಿಕ ಮಂಗಳೂರಿನಲ್ಲಿ34 ಮಂದಿಗೆ ಹೋಂ ಐಸೋಲೇಶನ್‌
    ಮಂಗಳೂರು: ಕೊರೋನಾ ಕಾಟದಿಂದ ಚೇತರಿಸುತ್ತಿದ್ದ ಜಗತ್ತಿಗೆಎ ಈಗ ಮಂಕಿಪಾಕ್ಸ್‌ ಎಂಬ ಹೊಸ ಸಾಂಕ್ರಾಮಿಕ ರೋಗ ವಕ್ಕರಿಸಿದೆ. ಕೇರಳದ ಕಣ್ಣೂರಿನಲ್ಲಿ 31 ವರ್ಷದ ವ್ಯಕ್ತಿಯಲ್ಲಿ ದೇಶದ ಎರಡನೇ ಮಂಕಿಪಾಕ್ಸ್(Monkeypox) ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದ ಜತೆ ಗಡಿ ಹಂಚಿಕೊಂಡಿರುವ ಮೈಸೂರು ಮತ್ತು ಮಂಗಳೂರಿನ ಆರೋಗ್ಯ ಇಲಾಖೆ ಅಧಿಕಾರಿಗಳು ಗಡಿಯೊಳಗೆ ಪ್ರವೇಶಿಸುವ ಜನರ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.
    ಕೇರಳದಲ್ಲಿ ಪತ್ತೆಯಾದ ಮಂಕಿಪಾಕ್ಸ್ ರೋಗಿ ವಿಮಾನದಲ್ಲಿ ಮಂಗಳೂರಿಗೆ ಬಂದು ಅಲ್ಲಿಂದ ಕಣ್ಣೂರಿಗೆ ಪ್ರಯಾಣಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಜತೆಗಿದ್ದ ಸಹ ಪ್ರಯಾಣಿಕರಿಗೆ ಹೋಂ ಐಸೋಲೇಶನ್‌ ವಿಧಿಸಲಾಗಿದೆ. ಸಹ ಪ್ರಯಾಣಿಕರನ್ನು ಮಂಗಳೂರು ಆರೋಗ್ಯಾಧಿಕಾರಿಗಳು ಪತ್ತೆಹಚ್ಚಿ ಹೋಂ ಐಸೊಲೇಷನ್‌ನಲ್ಲಿ ಇರಿಸಿದ್ದಾರೆ. ಕಣ್ಣೂರಿನ ವ್ಯಕ್ತಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈಯಿಂದ ಜುಲೈ 13ರಂದು ಬಂದಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ. ರಾಜೇಶ್ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಿದ್ದರು. ಆಗ ನೆಗೆಟಿವ್ ವರದಿ ಬಂದಿತ್ತು. ಅವರು ಕಣ್ಣೂರಿಗೆ ಹೋದ ಮೇಲೆ ಅಲ್ಲಿ ಮಂಕಿಪಾಕ್ಸ್‌ನ ಲಕ್ಷಣ ಗೋಚರವಾಗಿದೆ.
    ದುಬೈಯಿಂದ ಕೇರಳದ ರೋಗಿ ಜೊತೆಗೆ 191 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಮುಂದಿನ ಮೂರು ಮತ್ತು ಹಿಂದಿನ ಸೀಟುಗಳಲ್ಲಿ ಪ್ರಯಾಣ ಮಾಡಿದ 34 ಪ್ರಯಾಣಿಕರನ್ನು ಆರೋಗ್ಯ ಇಲಾಖೆ ಐಸೋಲೇಶನ್‌ನಲ್ಲಿಟ್ಟಿದೆ.. 34 ಪ್ರಯಾಣಿಕರಲ್ಲಿ 10 ಮಂದಿ ಮಂಗಳೂರು, 15 ಮಂದಿ ಕಣ್ಣೂರು ಮತ್ತು 9 ಮಂದಿ ಉಡುಪಿಯವರಾಗಿದ್ದಾರೆ. ಅವರಲ್ಲಿ 30 ಮಂದಿಯನ್ನು ಈಗಾಗಲೇ ಪತ್ತೆಹಚ್ಚಿ ಮುಂದಿನ 21 ದಿನಗಳವರೆಗೆ ಮನೆಗಳಲ್ಲಿ ಐಸೊಲೇಷನ್‌ನಲ್ಲಿರುವಂತೆ ಸೂಚಿಸಲಾಗಿದೆ. ಉಳಿದ ನಾಲ್ವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.
    ಐಸೊಲೇಷನ್‌ನಲ್ಲಿರುವವರ ಮೇಲೆ ಪ್ರತಿದಿನ ನಿಗಾ ವಹಿಸಲಾಗುತ್ತಿದ್ದು, ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದರೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಐಸೊಲೇಷನ್ ವಾರ್ಡ್‌ಗೆ ಶಿಫ್ಟ್ ಮಾಡಲಾಗುತ್ತದೆ. ತಿಂಗಳ ಹಿಂದೆ 10 ಬೆಡ್‌ಗಳ ಮಂಕಿಪಾಕ್ಸ್ ಐಸೊಲೇಷನ್ ವಾರ್ಡನ್ನು ವೆನ್‌ ಲಾಕ್ ಆಸ್ಪತ್ರೆಯಲ್ಲಿ ತೆರೆಯಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳ ಶಿಷ್ಟಾಚಾರ ಪ್ರಕಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತದೆ ಎಂದು ಡಾ. ರಾಜೇಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!