*1 ಕೋ.ರೂ. ಮಾದಕ ವಸ್ತು ವಶ
ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾಲಯದ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಒದಗಿಸುತ್ತಿದ್ದ ಮೋಡೆಲ್ ಹಾಗೂ ಅವನ ಗೆಳತಿಯನ್ನು ಬಂಧಿಸಿರುವ ಪೊಲೀಸರು ಅವರಿಂದ 1 ಕೋ. ರೂ. ಬೆಲೆಯ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಮೋಡೆಲ್ ಶುಭಂ ಮಲ್ಹೋತ್ರ ಅಲಿಯಾಸ್ ಸನ್ನಿ ಮತ್ತು ಅವನ ಗೆಳತಿ ಕೀರ್ತಿ ಸೆರೆಯಾದವರು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಡ್ರಗ್ ಪೂರೈಕೆ ಮಾಡುವ ಗ್ಯಾಂಗೊಂದು ಸಕ್ರಿಯವಾಗಿರುವ ಮಾಹಿತಿ ಸಿಕ್ಕಿ ಕ್ರೈಂ ಬ್ರಾಂಸ್ ಪೊಲೀಸರು ಕ್ಯಾಂಪಸ್ ಪರಿಸರದಲ್ಲಿ ಕಣ್ಣಿಟ್ಟಿದ್ದರು. ಸೋಮವಾರ ಮಲ್ಹೋತ್ರ ಮಾಲು ಸಮೇತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಸ್ವತಹ ಡ್ರಗ್ ವ್ಯಸನಿಯಾಗಿರುವ ಮಲ್ಹೋತ್ರ ಈ ದಂಧೆಯಿಂದ ಭಾರಿ ಲಾಭ ಗಳಿಸಬಹುದು ಎಂದು ಅರಿವಾದ ಬಳಿಕ ಡ್ರಗ್ ಪೂರೈಕೆಗಿಳಿದಿದ್ದ. ಹಿಮಾಚಲ ಪ್ರದೇಶದಿಂದ ಡ್ರಗ್ ತಂದು ದಿಲ್ಲಿಯಲ್ಲ ಮಾರಾಟ ಮಾಡುತ್ತಿದ್ದ. ಹೆಚ್ಚಾಗಿ ವಿದ್ಯಾರ್ಥಿಗಳೇ ಅವನ ಗ್ರಾಹಕರಾಗಿದ್ದರು. ಗೆಳತಿ ಕೀರ್ತಿ ಅವನಿಗೆ ಗ್ರಾಹಕರನ್ನು ಒದಗಿಸಲು ಸಹಕರಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕಪುಟ್ಟ ಮೋಡೆಲಿಂಗ್ ಮಾಡಿಕೊಂಡಿದ್ದ ಮಲ್ಹೋತ್ರ ಐಷರಾಮಿ ಜೀವನಶೈಲಿಗೆ ಹಣ ಸಾಲದಾದಾಗ ಡ್ರಗ್ಸ್ ದಂಧೆಗಿಳಿದಿದ್ದ.
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಮೋಡೆಲ್ ಬಂಧನ
