*ಎಲ್ಲ ನಾಲ್ವರು ಆರೋಪಿಗಳಿಗೆ ಆ.1ರ ತನಕ ನ್ಯಾಯಾಂಗ ಬಂಧನ
ಕುಂದಾಪುರ: ಇಲ್ಲಿನ ಒತ್ತಿನೆಣೆ ಸಮೀಪ ಹೇನ್ಬೇರುನಲ್ಲಿ ಕಾರ್ಕಳದ ಮೇಸ್ತ್ರಿ ಕೆಲಸದ ಆನಂದ ದೇವಾಡಿಗ ಎಂಬ 60 ವರ್ಷದ ವೃದ್ಧನನ್ನು ಕಾರಿನಲ್ಲಿ ಸಜೀವ ದಹಿಸಿದ ಪ್ರಕರಣದ ಆರೋಪಿಗಳ ಪೈಕಿ ಶಿಲ್ಪಾ ಪೂಜಾರಿಯನ್ನು ಪೊಲೀಸರು ಶಿವಮೊಗ್ಗದ ಜೈಲಿಗೆ ಸ್ಥಳಾಂತರಿಸಿದ್ದಾರೆ.
ಆರೋಪಿಗಳಾದ ಸದಾನಂದ ಶೇರೆಗಾರ (52), ಶಿಲ್ಪಾ ಪೂಜಾರಿ (30), ಸತೀಶ್ ದೇವಾಡಿಗ (49) ಮತ್ತು ನಿತಿನ್ ದೇವಾಡಿಗ (35) ಅವರನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಗಳನ್ನು ಆ.1ರ ವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಶಿಲ್ಪಾಳನ್ನು ಶಿವಮೊಗ್ಗದ ಜೈಲಿಗೆ ಸ್ಥಳಾಂತರಿಸಲು ಹೇಳಿದೆ.
ವಿಚಾರಣಾಧೀನ ಕೈದಿಗಳನ್ನು ಹಿರಿಯಡ್ಕದ ಸಬ್ಜೈಲಿನಲ್ಲಿಡಲಾಗುತ್ತದೆ. ಆದರೆ ಅಲ್ಲಿ ಮಹಿಳಾ ಕೈದಿಗಳನ್ನು ಇರಿಸಲು ಅವಕಾಶವಿಲ್ಲದ ಕಾರಣ ಶಿಲ್ಪಾಳನ್ನು ಶಿವಮೊಗ್ಗದ ಜೈಲಿಗೆ ಕರೆದೊಯ್ಯಲಾಗಿದೆ.
ಫೋರ್ಜರಿ ಕೇಸೊಂದರಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಮುಖ್ಯ ಆರೋಪಿ ಸದಾನಂದ ತಾನು ಸತ್ತಿದ್ದೇನೆಂದು ಜಗತ್ತನ್ನು ನಂಬಿಸುವ ಸಲುವಾಗಿ ತನ್ನಂತೆಯೇ ಕಾಣುವ ಆನಂದ ದೇವಾಡಿಗ ಅವರನ್ನು ಶಿಲ್ಪಾಳ ನೆರವಿನಿಂದ ಉಪಾಯವಾಗಿ ಕಂಠಮಟ್ಟ ಮದ್ಯ ಕುಡಿಸಿ ಕಾರಿನಲ್ಲಿ ಹೇನ್ಬೇರ್ಗೆ ಕರೆದುಕೊಂಡು ಹೋಗಿ ತನ್ನದೇ ಹಳೇ ಕಾರಿನ ಸಮೇತ ಜೀವಂತ ಸುಟ್ಟು ಹಾಕಿದ್ದ. ಕ್ರೌರ್ಯದ ಪರಮಾವಧಿಯನ್ನು ಮೆರೆದಿರುವ ಈ ಪ್ರಕರಣ ರಾಜ್ಯಾದ್ಯಂತ ಕುತೂಹಲ ಕೆರಳಿಸಿದೆ. ಉಳಿದಿಬ್ಬರು ಆರೋಪಿಗಳು ಸದಾನಂದ ಮತ್ತು ಶಿಲ್ಪಾಗೆ ಪಲಾಯನ ಮಾಡಲು ಸಹಕರಿಸಿದ ಆರೋಪ ಎದುರಿಸುತ್ತಿದ್ದಾರೆ.ಎಲ್ಲ ನಾಲ್ವರು ಆರೋಪಿಗಳು ಕಾರ್ಕಳ ಆಸುಪಾಸಿನವರು.
ಹೇನ್ಬೇರ್ ಸಜೀವ ದಹನ ಪ್ರಕರಣ: ಆರೋಪಿ ಶಿಲ್ಪಾ ಶಿವಮೊಗ್ಗ ಜೈಲಿಗೆ ಶಿಫ್ಟ್
Recent Comments
ಕಗ್ಗದ ಸಂದೇಶ
on