ಮೋದಿಯನ್ನು ಹೊಗಳಿದ ಕಾಂಗ್ರೆಸ್‌!

ಹೊಸದಿಲ್ಲಿ: ಸದಾ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುತ್ತಿರುವ ಕಾಂಗ್ರೆಸ್‌ ಇಂದು ಪ್ರಶಂಸಿಸಿ ಅಚ್ಚರಿ ಹುಟ್ಟಿಸಿದೆ. ಗುಜರಾತ್‌ ಯುವ ಕಾಂಗ್ರೆಸ್‌ನ ಅಧಿಕೃತ ಟ್ವೀಟ್‌ ಖಾತೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿರುವ ಟ್ವೀಟ್‌ ಒಂದು ಪ್ರಕಟವಾಗಿ ಕ್ಷಣಾರ್ಧದಲ್ಲಿ ವೈರಲ್‌ ಆಗಿದೆ. ನಾವೇ ಶಿಲಾನ್ಯಾಸ ಮಾಡುತ್ತೇವೆ, ನಾವೇ ಉದ್ಘಾಟನೆಯನ್ನೂ ಮಾಡುತ್ತೇವೆ ಎಂದು ಯುವ ಕಾಂಗ್ರೆಸ್‌ ಮೋದಿಯವರ ಚಿತ್ರ ಸಮೇತ ಟ್ವೀಟ್‌ ಮಾಡಿತ್ತು. ಆದರೆ ನಂತರ ತನ್ನ ಪ್ರಮಾದ ಅರಿವಾಗುತ್ತಲೇ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದೆ. ಆದರೆ ಅಷ್ಟರಲ್ಲಿ ಈ ಟ್ವೀಟ್‌ ಸಖತ್‌ ವೈರಲ್‌ ಆಗಿದೆ. ಕೊನೆಗೂ ಕಾಂಗ್ರೆಸ್‌ಗೆ ಜ್ಞಾನದೋಯವಾಗಿದೆ ಎಂದು ಅನೇಕರು ಪಕ್ಷದ ಕಾಲೆಳೆದಿದ್ದಾರೆ





























































































































































































































error: Content is protected !!
Scroll to Top