Saturday, October 1, 2022
spot_img
Homeಸುದ್ದಿಚೀನ ಗಡಿಯಲ್ಲಿ 18 ಕಾರ್ಮಿಕರು ನಾಪತ್ತೆ

ಚೀನ ಗಡಿಯಲ್ಲಿ 18 ಕಾರ್ಮಿಕರು ನಾಪತ್ತೆ

*ಓರ್ವನ ಶವ ಪತ್ತೆ
ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ಚೀನ ದೇಶದ ಗಡಿಗೆ ಒತ್ತಿಕೊಂಡಿರುವ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ 19 ಕಾರ್ಮಿಕರು ಜು.5ರಿಂದ ನಾಪತ್ತೆಯಾಗಿರುವುದು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಈ ಪೈಕಿ ಓರ್ವ ಕಾರ್ಮಿಕನ ಶವ ಇಂದು ಪತ್ತೆಯಾಗಿದೆ.
ಕುರುಂಗ್‌ಕುಮೇ ಜಿಲ್ಲೆಯ ಡಾಮಿನ್‌ ಎಂಬಲ್ಲಿ ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಎಲ್ಲ 19 ಕಾರ್ಮಿಕರು ನಾಪತ್ತೆಯಾಗಿರುವುದನ್ನು ಅಲ್ಲಿನ ಜಿಲ್ಲಾಧಿಕಾರಿ ದೃಢಪಡಿಸಿದ್ದಾರೆ. ಓರ್ವನ ಶವ ಸಿಕ್ಕಿದ್ದರೂ ಎಲ್ಲ ಕಾರ್ಮಿಕರು ಡಾಮಿನ್‌ನ ಕುಮೇ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆಗಳಿವೆ ಎನ್ನುತ್ತಿವೆ ವರದಿಗಳು.
ಕಾಮಗಾರಿ ನಡೆಯುತ್ತಿದ್ದ ಸ್ಥಳ ಭಾರತ -ಚೀನ ಗಡಿಗೆ ಒತ್ತಿಕೊಂಡಿದೆ. ಕಾರ್ಮಿಕರು ಈದ್‌ ಹಬ್ಬಕ್ಕೆ ರಜೆ ನೀಡುವಂತೆ ಗುತ್ತಿಗೆದಾರನಿಗೆ ಮನವಿ ಮಾಡಿದ್ದರು. ಗುತ್ತಿಗೆದಾರ ರಜೆ ನೀಡಲು ನಿರಾಕರಿಸಿದಾಗ ತಪ್ಪಿಸಿಕೊಂಡು ಹೋಗಿದ್ದರು. ದಟ್ಟವಾದ ಕಾಡಿನಲ್ಲಿ ದಾರಿತಪ್ಪಿರುವ ಅವರು ನದಿಯ ಪ್ರವಾಹದಲ್ಲಿ ಮುಳುಗಿರುವ ಶಂಕೆಯಿದೆ. ಕಾರ್ಮಿಕರ ಕುರಿತಾದ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅವರ ಶೋಧಕ್ಕೆ ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!