Saturday, October 1, 2022
spot_img
Homeಸುದ್ದಿಸಿದ್ದರಾಮೋತ್ಸವಕ್ಕೆ ಭರದ ತಯಾರಿ

ಸಿದ್ದರಾಮೋತ್ಸವಕ್ಕೆ ಭರದ ತಯಾರಿ


*ಆ.3ರಂದು ದಾವಣಗೆರೆಯಲ್ಲಿ ಉತ್ಸವ

ಬೆಂಗಳೂರು: ವಿರೋಧ ಮತ್ತು ಅಪಸ್ವರಗಳ ನಡುವೆಯೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು 75ನೇ ಜನ್ಮದಿನ ಆಚರಣೆಗಾಗಿ ಹಮ್ಮಿಕೊಂಡಿರುವ ಸಿದ್ದರಾಮೋತ್ಸವಕ್ಕೆ ದಾವಣಗೆರೆಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.
ಚುನಾವಣೆಗೆ ಮುಂಚಿತವಾಗಿ ಸಿದ್ದರಾಮಯ್ಯ ಅವರ ಬಲ ಪ್ರದರ್ಶನದ ಉತ್ಸವ ಎಂಬ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷೆ ಡಿ.ಕೆ.ಶಿವಕುಮಾರ್‌ ಸೇರಿ ಹಲವು ಮೂಲ ಕಾಂಗ್ರೆಸಿಗರು ಸಿದ್ದರಾಮೋತ್ಸವದ ಬಗ್ಗೆ ಒಳಗೊಳಗೆ ಸಿಡಿಮಿಡಿಗೊಂಡಿದ್ದಾರೆ.ಆದರೆ ಅದನ್ನು ಲೆಕ್ಕಿಸದೆ ಸಿದ್ದರಾಮಯ್ಯನವರ ಅಭಿಮಾನಿಗಳು ಉತ್ಸವದ ತಯಾರಿಯಲ್ಲಿ ತೊಡಗಿದ್ದಾರೆ.
ಆ.3ರಂದು ದಾವಣಗೆರೆಯಲ್ಲಿ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ಖಾಸಗಿ ಮೈದಾನದಲ್ಲಿ ಸಿದ್ದರಾಮೋತ್ಸವ ಜರುಗಲಿದೆ.
ರಾಹುಲ್‌ ಗಾಂಧಿ, ಕೆ. ಸಿ. ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೆವಾಲಾ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್‌ ಸೇರಿ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಹಂಸಲೇಖ ನಿರ್ದೇಶನದಲ್ಲಿ ಸಂಗೀತ ಕಾರ್ಯಕ್ರಮವೂ ನಡೆಯಲಿದೆ. ಸುಮಾರು 300 ಜನರು ಆಸೀನರಾಗುವ ಬೃಹತ್‌ ವೇದಿಕೆ ನಿರ್ಮಾಣವಾಗುತ್ತಿದೆ.

LEAVE A REPLY

Please enter your comment!
Please enter your name here

Most Popular

error: Content is protected !!