ಬೆಂಗಳೂರು : ಎರಡು ವರ್ಷಗಳಿಂದ ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿದ, ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದೆ ಜನಸಮಾನ್ಯರ ಮೇಲೆ ಅಗತ್ಯ ವಸ್ತುಗಳ ಬೆಲೆಏರಿಕೆ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿರುವ ಸರಕಾರ ಈಗ ಅಕ್ಕಿಯ ಮೇಲೆ ಎಇಎಸ್ಟಿ ವಿಧಿಸಿದೆ. ಅಕ್ಕಿ ಮೇಲೆ ವಿಧಿಸಿರುವ ಜಿಎಎಸ್ಟಿ ಆದೇಶ ವಾಪಾಸ್ ಪಡೆದು ಮುಂಗಾರು ಕೃಷಿಗೆ ಅವಶ್ಯಕತೆ ಇರುವ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆ ಮಾಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ಜು.21 ರಂದು ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಅಕ್ಕಿ ಸಮೇತ ಮುತ್ತಿಗೆ ಹಾಕಲು ರಾಜ್ಯ ರೈತ ಸಂಘವು ನಿರ್ಧರಿಸಿದೆ. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ. ನಳಿನಿ ಗೌಡ ಮಾತನಾಡಿ, ಬಡವರ ಹಸಿವು ತುಂಬುವ ಅಕ್ಕಿಗೂ ಜಿಎಸ್ಟಿ ವಿಧಿಸುವ ಮೂಲಕ ಬಡವರ, ಕಾರ್ಮಿಕರ ಅನ್ನವನ್ನು ಕಿತ್ತುಕೊಳ್ಳುವ ಮೂಲಕ ದೇಶದ ಕೋಟ್ಯಂತರ ಬಡವರನ್ನು ಅಪೌಷ್ಟಿಕತೆಗೆ ತಳ್ಳುವ ಮೂಲಕ ಸರಕಾರ ವಿರೋದಿ ನೀತಿ ಅನುಸರಿಸುತ್ತಿದ್ದಾರೆ ಎಂದು ಹೇಳಿದರು. ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣ ಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ವಿಭಾಗೀಯ ಕಾರ್ಯಾಧ್ಯಕ್ಷ ಫಾರೂಖ್ ಪಾಷ ಮೊದಲಾದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Recent Comments
ಕಗ್ಗದ ಸಂದೇಶ
on