ಕಾರ್ಕಳ : ತೀರಾ ಹದಗೆಟ್ಟು ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದ್ದ ಕುಕ್ಕುಂದೂರು ಗ್ರಾಮದ 3ನೇ ವಾರ್ಡಿನ ಪರಪು ಒಂದನೇ ಅಡ್ಡರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಜೆಸಿಬಿ ಮೂಲಕ ಹೊಂಡ ಗುಂಡಿ ಸರಿಪಡಿಸಿ, ಜಲ್ಲಿಹುಡಿ ಹಾಕುವ ಕಾರ್ಯ ಮಾಡಲಾಗುತ್ತಿದೆ. ಪಂಚಾಯತ್ ಕ್ರಿಯಾ ಯೋಜನೆಯಲ್ಲಿ ರಸ್ತೆ ದುರಸ್ತಿಗೆ ಈಗಾಗಲೇ ಅನುದಾನವನ್ನು ಇರಿಸಿದ್ದು, ಭಾರೀ ಮಳೆ ಕಾರಣದಿಂದ ಡಾಮರೀಕರಣ ವಿಳಂಬವಾಗುತ್ತಿದೆ. ಹೀಗಾಗಿ ಇದೀಗ ತಾತ್ಕಾಲಿಕವಾಗಿ ಪಂಚಾಯತ್ ವತಿಯಿಂದ ಜಲ್ಲಿ ಹುಡಿ ಹಾಸುವ ಕಾರ್ಯ ಮಾಡಲಾಗುತ್ತಿದೆ.
ವರದಿ ಪ್ರಕಟ
ರಸ್ತೆ ಹದಗೆಟ್ಟ ಕುರಿತು ಸ್ಥಳೀಯರು ನ್ಯೂಸ್ ಕಾರ್ಕಳಕ್ಕೆ ಚಿತ್ರಸಹಿತ ಮಾಹಿತಿ ನೀಡಿದ್ದರು. ಜು. 15ರಂದು ನ್ಯೂಸ್ ಕಾರ್ಕಳದಲ್ಲಿ ವರದಿ ಪ್ರಕಟಗೊಂಡಿದ್ದು, ಇದೀಗ ತಾತ್ಕಾಲಿಕ ನೆಲೆಯಲ್ಲಿ ಜಲ್ಲಿ ಹಾಸುವ ಮೂಲಕ ಸ್ಥಳೀಯರ ಬೇಡಿಕೆಗೆ ಸ್ಪಂದನೆ ದೊರೆತಿದೆ.