Sunday, October 2, 2022
spot_img
Homeಸುದ್ದಿಮಗುವಿನ ಪ್ರಾಣಕ್ಕೆ ಸಂಚಕಾರ ತಂದ ಕಪಿಚೇಷ್ಟೆ

ಮಗುವಿನ ಪ್ರಾಣಕ್ಕೆ ಸಂಚಕಾರ ತಂದ ಕಪಿಚೇಷ್ಟೆ

ಬರೇಲಿ: ಕಪಿಚೇಷ್ಟೆ ಮಗುವಿನ ಪ್ರಾಣಕ್ಕೆ ಕುತ್ತು ತಂದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಸಂಭವಿಸಿದೆ. ಕೋತಿಯೊಂದು ಮೂರನೇ ಅಂತಸ್ತಿನ ಛಾವಣಿಯಿಂದ ನಾಲ್ಕು ತಿಂಗಳು ಪ್ರಾಯದ ಮಗುವನ್ನು ಎತ್ತಿ ಕೆಳಗೆಸೆದಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ಬರೇಲಿಯ ಡುಂಕಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಶುಕ್ರವಾರ ಸಂಜೆ ನಿರ್ದೇಶ ಉಪಾಧ್ಯಾಯ ಅವರು ಪತ್ನಿ ಮತ್ತು ನಾಲ್ಕು ತಿಂಗಳ ಮಗುವಿನ ಜತೆ ಟೆರೇಸ್‌ ಮೇಲಿದ್ದರು.ಆಗ ಕೋತಿಗಳ ಹಿಂಡೊಂದು ಛಾವಣಿಗೆ ನುಗ್ಗಿ ಬಂದಿದ್ದು, ಉಪಾಧ್ಯಾಯ ಕೋತಿಗಳನ್ನು ಓಡಿಸಲು ಯತ್ನಿಸಿದಾಗ ಕೋತಿಗಳು ಅವರನ್ನು ಸುತ್ತುವರಿದಿವೆ. ಉಪಾಧ್ಯಾಯ ಮತ್ತು ಪತ್ನಿ ಮನೆಯೊಳಗೆ ಹೋಗುವ ಸಲುವಾಗಿ ಮೆಟ್ಟಲಿನತ್ತ ಓಡುವಾಗ ಮಗು ಕೈಜಾರಿ ಕೆಲಗೆ ಬಿದ್ದಿದೆ. ಗಡವ ಕೋತಿಯೊಂದು ತಕ್ಷಣ ಮಗುವನ್ನು ಎತ್ತಿ ಕೆಳಗೆಸೆದಿದೆ. ನೆಲಕ್ಕಪ್ಪಳಿಸಿದ ಪರಿಣಾಮ ಹಸುಗೂಸು ಸ್ಥಳದಲ್ಲೇ ಸಾವನ್ನಪ್ಪಿದೆ.

LEAVE A REPLY

Please enter your comment!
Please enter your name here

Most Popular

error: Content is protected !!