ಕಾರ್ಕಳ : ಕುಕ್ಕೂಂದೂರು ಬಂಗ್ಲೆಗುಡ್ಡೆ ನಿವಾಸಿಯೊಬ್ಬರಿಗೆ ಯೂಸರ್ ಐಡಿ ಕದ್ದು ಲಕ್ಷಾಂತರ ರೂ. ವಂಚಿಸಿದ ಕುರಿತು ಕೇಸು ದಾಖಲಾಗಿದೆ. ರುಡಾಲ್ಫ್ ಡಿ ಸೋಜಾ ಎಂಬವರು 2018-19ನೇ ಸಾಲಿನಲ್ಲಿ ಟಿಬಿಓ ಟಾಕ್ ಕಂಪೆನಿಯ ಸ್ಕೈಲೈನ್ ಎಂಟರ್ಪ್ರೈಸಸ್ ಮತ್ತು ಟ್ರಾವೆಲ್ಸ್ನಲ್ಲಿ ವಿಮಾನ, ರೈಲು ಟಿಕೆಟ್ ಬುಕ್ ಮಾಡುವ ಫ್ರಾಂಚೈಸಿ ಪಡೆದು ಸಂಸ್ಥೆಯ ಯೂಸರ್ ಐಡಿ ಹೊಂದಿದ್ದರು. 2022 ಎಪ್ರಿಲ್ ತಿಂಗಳಿನ ಕೊನೆಯಲ್ಲಿ ಟಿಬಿಓ ಕಂಪೆನಿಯಿಂದ ಅವರಿಗೆ ನಿಮ್ಮ ಐಡಿಗೆ ರೂ. 14,76,284 ಹಣ ಪಾವತಿಸಲಾಗಿದೆ. ಅದನ್ನು ಕೂಡಲೇ ಮರುಪಾವತಿಸಿ ಎಂದು ಕರೆಬಂದಿತ್ತು. ಆದರೆ ರುಡಾಲ್ಫ್ ಅವರು 2 ವರ್ಷದಿಂದ ಈ ಐಡಿಯನ್ನು ಬಳಸಿರಲಿಲ್ಲ. ಇವರ ಸಂಸ್ಥೆಯಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುವ ವ್ಯಕ್ತಿ ಅವರ ಐಡಿಯನ್ನು ಕದ್ದು, ಇನ್ನೋರ್ವನ ಮೂಲಕ ಕಂಪನಿಯ ಐಡಿ ಪಾಸ್ವರ್ಡ್ ರೀಸೆಟ್ ಮಾಡಿಸಿದ್ದ. ರುಡಾಲ್ಫ್ ಅವರೇ ಐಡಿಯನ್ನು ಬಳಸುವಂತೆ ಬಿಂಬಿಸಿ ಕಂಪನಿಯಿಂದ ಬಂದಿರುವ ಹಣವನ್ನು ಬುಕ್ಕಿಂಗ್ಗೆ ಖರ್ಚು ಮಾಡಿ ಮರುಪಾವತಿಸದ ಕಂಪನಿಗೆ ಮತ್ತು ರುಡಾಲ್ಫ್ ಅವರಿಗೆ ನಷ್ಟ ಉಂಟುಮಾಡಿದ ಕುರಿತು ಉಡುಪಿಯ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Recent Comments
ಕಗ್ಗದ ಸಂದೇಶ
on