ಬೆಂಗಳೂರು: ಸ್ವಾತಂತ್ರ್ಯದ 75ನೇ ವರ್ಷದಂಗವಾಗಿ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸರಕಾರ ತೀರ್ಮಾನಿಸಿದ್ದು, ರಾಜ್ಯದಲ್ಲಿ ಆ.15ರಂದು 1 ಕೋಟಿ ತ್ರಿವರ್ಣ ಧ್ವಜ ಹಾರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸರ್ಕಾರಿ, ಸರ್ಕಾರೇತರ ಕಚೇರಿಗಳು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಿಎಂ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಮತ್ತು ಇತರ ಉನ್ನತ ಅಧಿಕಾರಿಗಳಿಗೆ ಕಾರ್ಯಕ್ರಮಗಳನ್ನು ರೂಪಿಸುವ ಹೊಣೆ ವಹಿಸಲಾಗಿದೆ.
ಧಾರವಾಡ ರಾಷ್ಟ್ರಧ್ವಜ ತಯಾರಿ ಕೇಂದ್ರ 50 ಲಕ್ಷ ಧ್ವಜ ಪೂರೈಸಲಿದೆ. ಉಳಿದ 50 ಲಕ್ಷ ಧ್ವಜವನ್ನು ಕೇಂದ್ರ ಸರಕಾರ ಪೂರೈಸಲಿದೆ.
ಆ.15ರಂದು ರಾಜ್ಯದಲ್ಲಿ ಹಾರಲಿದೆ 1 ಕೋಟಿ ರಾಷ್ಟ್ರಧ್ವಜ
Recent Comments
ಕಗ್ಗದ ಸಂದೇಶ
on