ಹಿಂದು ಧರ್ಮ ಸ್ವೀಕರಿಸಿದ ಮುಸ್ಲಿಂ ಯುವತಿಗೆ ಜೀವ ಬೆದರಿಕೆ

ಲಖನೌ: ಪ್ರೀತಿಸಿದ ಯುವಕನನ್ನು ಮದುವೆಯಾಗುವ ಸಲುವಾಗಿ ಹಿಂದು ಧರ್ಮ ಸ್ವೀಕರಿಸಿರುವ ಉತ್ತರ ಪ್ರದೇಶದ ಮುಸ್ಲಿಂ ಯುವತಿಯೊಬ್ಬಳು ಈಗ ಮತಾಂಧ ಸಂಘಟನೆಗಳಿಂದ ಜೀವ ಬೆದರಿಕೆ ಎದುರಿಸುತ್ತಿದ್ದಾಳೆ.
ಉತ್ತರ ಪ್ರದೇಶದ ಅಜಾಂಗಢ ನಗರದಲ್ಲಿ ಈ ಮದುವೆ ನಡೆದಿದ್ದು, ಇದೀಗ ಈ ಜೋಡಿಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಬಳಿಕ ಜೋಡಿಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಯುವ ಜೋಡಿ ಪೊಲೀಸ್‌ ರಕ್ಷಣೆ ಕೋರಿದೆ. ಖಾನ್‍ಪುರ್ ಫತೇಹ್ ಗ್ರಾಮದ ಹಿಂದೂ ಯುವಕ ಸೂರಜ್ ಮತ್ತು ಹೈದರ್‍ಪುರ ಖಾಸ್ ಗ್ರಾಮದ ಮುಸ್ಲಿಂ ಯುವತಿ ಮೋಮಿನ್ ಖಾತೂನ್ ಪ್ರೀತಿಸಿ ಮದುವೆಯಾದವರು.
ಕಳೆದ ಜುಲೈ 13ರಂದು ಅಟ್ರೌಲಿಯಾ ಸಮ್ಮೋ ಮಾತಾ ದೇವಾಲಯದ ಸಂಕೀರ್ಣದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದೆ. ಹಿಂದೂ ಧರ್ಮವನ್ನು ಸ್ವೀಕರಿಸಿದ ಮೋಮಿನ್ ಖಾತೂನ್ ಹಿಂದೂ ಸಂಪ್ರದಾಯದಂತೆ ಸೂರಜ್ ಕೊರಳಿಗೆ ಹಾರ ಹಾಕಿ ಮದುವೆ ಆಗಿದ್ದಾಳೆ. ಈ ಜೋಡಿಯನ್ನು ಕುಟುಂಬ ಸದಸ್ಯರು ಮತ್ತು ಗಣ್ಯರು ಆಶೀರ್ವದಿಸಿದ್ದರು.error: Content is protected !!
Scroll to Top