ಹೆಬ್ರಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಧರ್ಮಸ್ಥಳ ಧರ್ಮಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಯಂತ್ರಶ್ರೀ ಭತ್ತ ಬೇಸಾಯ ನಾಟಿ ಯೋಜನೆಯ ಅಂಗವಾಗಿ ಶಿವಪುರ ಒಕ್ಕೂಟದಲ್ಲಿ ಉದ್ಘಾಟನಾ ಸಮಾರಂಭ ಇಂದು ಬೆಳಿಗ್ಗೆ ಗಂಟೆ 10ಕ್ಕೆ ಎಲಿಕೋಡು ಭೋಜ ಶೆಟ್ಟಿ ಅವರ ಮನೆಯಲ್ಲಿ ನೆರವೇರಿತು. ಹಡಿಲು ಬಿದ್ದ ಭೂಮಿಯಲ್ಲಿ ಯಂತ್ರವನ್ನು ಬಳಸಿಕೊಂಡು ಭತ್ತ ಕೃಷಿಯನ್ನು ಕಡಿಮೆ ಖರ್ಚಿನಲ್ಲಿ ಲಾಭದಾಯಕವನ್ನಾಗಿ ಹೇಗೆ ಮಾಡಿಕೊಳ್ಳಬಹುದು ಎಂದು ಶ್ರೀ. ಕ್ಷೇ .ಧ. ಗ್ರಾ. ಯೋಜನೆಯ ಕೃಷಿ ಅಧಿಕಾರಿ ಉಮೇಶ್ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಿವಪುರ ಗ್ರಾ. ಪಂ. ಅಧ್ಯಕ್ಷ ಶೇಖರ್ ಶೆಟ್ಟಿ, ತಾ. ಪಂ. ನಿಕಟಪೂರ್ವ ಅಧ್ಯಕ್ಷ ರಮೇಶ್ ಪೂಜಾರಿ, ಪ್ರಗತಿಪರ ಕೃಷಿಕ ಶ್ರೀಕಾಂತ ಆಚಾರ್ಯ, ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಪೂಜಾರಿ, ಸೇವಾ ಪ್ರತಿನಿಧಿ ಮಂಜುಳಾ, ಉಪಾಧ್ಯಕ್ಷ ವಂದನಾ, ಕಾರ್ಯದರ್ಶಿ ಭುವನೇಂದ್ರ ಆಚಾರ್ಯ, ದೈಹಿಕ ಶಿಕ್ಷಣ ಪರಿವೀಕ್ಷ ನಿತ್ಯಾನಂದ ಶೆಟ್ಟಿ, ವಿಜಯಶೆಟ್ಟಿ ಹಾಗೂ ಒಕ್ಕೂಟದ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಶಿವಪುರದಲ್ಲಿ ಯಂತ್ರಶ್ರೀ ಭತ್ತ ಬೇಸಾಯ ನಾಟಿ ಯೋಜನೆ
Recent Comments
ಕಗ್ಗದ ಸಂದೇಶ
on