Saturday, October 1, 2022
spot_img
Homeದೇಶಸೇನಾ ಹೆಲಿಕಾಪ್ಟರ್ ಪತನ : 14 ಸಾವು

ಸೇನಾ ಹೆಲಿಕಾಪ್ಟರ್ ಪತನ : 14 ಸಾವು


ಮೆಕ್ಸಿಕೋ : ಸೇನಾ ಹೆಲಿಕಾಪ್ಟರ್ ಹಠಾತ್ತನೆ ನೆಲಕ್ಕೆ ಅಪ್ಪಳಿಸಿದೆ ಎಂದು ಹೇಳಲಾಗಿದೆ. ಮೆಕ್ಸಿಕೋದ ವಾಯುವ್ಯ ಪ್ರದೇಶದ ಸಿನಾಲೋವಾ ರಾಜ್ಯದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಹೆಲಿಕಾಪ್ಟರ್‌ನಲ್ಲಿ 15 ಜನರಿದ್ದರು. ಆದರಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಒಬ್ಬ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಅಮೆರಿಕದ ಮೋಸ್ಟ್ ವಾಂಟೆಡ್ ಡ್ರಗ್ ಕಿಂಗ್ ಪಿನ್ ರಾಫೆಲ್ ಕ್ಯಾರೊ ಕ್ವಿಂಟೆರೊ ಅವರನ್ನು ಮೆಕ್ಸಿಕನ್ ಪೊಲೀಸರು ವಶಕ್ಕೆ ಪಡೆದ ಕೆಲವೇ ಗಂಟೆಗಳಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಈ ಘಟನೆಗೂ ರಾಫೆಲ್ ಕ್ಯಾರೊ ಗ್ಯಾಂಗ್ ಗೆ ಏನಾದರೂ ಸಂಬಂಧವಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here

Most Popular

error: Content is protected !!