Saturday, October 1, 2022
spot_img
Homeಸ್ಥಳೀಯ ಸುದ್ದಿಕರಿಯಕಲ್ಲು ಹಿಂದು ರುದ್ರ ಭೂಮಿಯ ಸಿಲಿಕಾನ್‌ ಒಲೆಯ ಒಂದು ಬ್ಲಾಕ್‌ ಕಳವು

ಕರಿಯಕಲ್ಲು ಹಿಂದು ರುದ್ರ ಭೂಮಿಯ ಸಿಲಿಕಾನ್‌ ಒಲೆಯ ಒಂದು ಬ್ಲಾಕ್‌ ಕಳವು

ಕಾರ್ಕಳ : ಕಾರ್ಕಳ ಪುರಸಭಾ ವ್ಯಾಪ್ತಿಯ ಕರಿಯಕಲ್ಲು ಬಳಿ ಇರುವ ಹಿಂದು ರುದ್ರಭೂಮಿಯಲ್ಲಿ ಮೃತ ಶವಗಳನ್ನು ಸುಡಲು ಅಳವಡಿಸಿರುವ ಸಿಲಿಕಾನ್‌ ಒಲೆಯ ಒಳಗಿರುವ ಒಂದು ಬ್ಲಾಕ್‌ ಕಳವಾಗಿರುತ್ತದೆ. ಇದರ ಮೊತ್ತ ಅಂದಾಜು ರೂ. 7ಸಾವಿರ ಆಗಿರುತ್ತದೆ. ರುದ್ರ ಭೂಮಿಯ ಶುಚಿತ್ವ ಹಾಗೂ ಬಂದಂತಹ ಶವಗಳನ್ನು ಸಂಪ್ರದಾಯ ಬದ್ಧವಾಗಿ ಮುಕ್ತಿಮಾಡುವ ಬಗ್ಗೆ ಒಂದು ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದ್ದು, ಸಮಿತಿಯು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದೆ. ಕೊರೋನಾ ಸಂದರ್ಭದಲ್ಲಿ ಸಮಿತಿಯು ಬಹಳ ಮೃತ ದೇಹಗಳನ್ನು ಮತ್ತು ಅನಾಥ ಶವಗಳನ್ನು ಹಗಲು ರಾತ್ರಿ ಎನ್ನದೆ ದಫನ ಮತ್ತು ದಹನ ಮಾಡುತ್ತಾ ಬರುತ್ತಿದ್ದು, ಜು.15 ರಂದು ಯಾರೋ ಅಪರಿಚಿತರು ಬಂದು ಮೃತ ದೇಹಗಳನ್ನು ಸುಡುವ ಒಂದು ಸಿಲಿಕಾನ ಒಲೆಯ ನಾಲ್ಕು ಬ್ಲಾಕ್‌ ಗಳಲ್ಲಿ ಒಂದು ಬ್ಲಾಕನ್ನು ಕಳವು ಮಾಡಿರುತ್ತಾರೆ. ಜು.16 ರಂದು ಬೆಳಗ್ಗೆ ಸಮಿತಿ ಸದಸ್ಯರು ಮೃತ ದೇಹ ಸುಡಲು ತಯಾರಿ ಮಾಡುವ ಸಂದರ್ಭದಲ್ಲಿ ಬ್ಲಾಕ್‌ ಕಳವಾಗಿರುವುದು ಪತ್ತೆಯಾಗಿರುತ್ತದೆ.


ಈ ಸಂದರ್ಭದಲ್ಲಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೋವಿಂದ ಮತ್ತು ಜಯ ಅವರಿಗೆ ಬ್ಲಾಕ್‌ ಕಳುವಾಗಿರುವುದು ಕಂಡುಬಂದಿದ್ದು, ಸಂಚಾಲಕ ಪ್ರಕಾಶ್‌ ರಾವ್‌ ಅವರಿಗೆ ವಿಷಯ ತಿಳಿಸಿ, ಅವರು ಪುರಸಭೆಯ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಯವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿರುತ್ತಾರೆ. ಕಳವುಗೈದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕಾಗಿ ಸಂಚಾಲಕ ಪ್ರಕಾಶ್‌ ರಾವ್‌ ನಗರ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದು, ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here

Most Popular

error: Content is protected !!