Saturday, October 1, 2022
spot_img
Homeರಾಜ್ಯಸರಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೊಗೆ ನಿರ್ಬಂಧ : ಆದೇಶ ಹೊರಡಿಸಿದ ದಿನವೇ ಹಿಂಪಡೆದ ಸರಕಾರ

ಸರಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೊಗೆ ನಿರ್ಬಂಧ : ಆದೇಶ ಹೊರಡಿಸಿದ ದಿನವೇ ಹಿಂಪಡೆದ ಸರಕಾರ

ಬೆಂಗಳೂರು: ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರು, ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ ತೆಗೆಯುವುದು, ವಿಡಿಯೊ ಮಾಡುವುದಕ್ಕೆ ನಿರ್ಬಂಧ ಹೇರಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. ಸಾರ್ವಜನಿಕರು ಸರ್ಕಾರಿ ಕಚೇರಿಯ ಸಮಯದಲ್ಲಿ ಬಂದು ಫೋಟೋ, ವಿಡಿಯೊ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಇದು ದುರ್ಬಳಕೆಯಾಗುವ ಸಾಧ್ಯತೆಯಿದೆ. ಇದರಿಂದ ಸರ್ಕಾರಕ್ಕೆ ಮತ್ತು ಸರ್ಕಾರದ ಇಲಾಖೆಗಳ ಘನತೆಗೆ ಕುಂದುಂಟಾಗುತ್ತದೆ. ವಿಶೇಷವಾಗಿ ಮಹಿಳಾ ನೌಕರರಿಗೆ ತೊಂದರೆಯುಂಟಾಗುತ್ತದೆ. ಹೀಗಾಗಿ ಸರಕಾರಿ ಕಚೇರಿಯ ಸಮಯದಲ್ಲಿ ಸಾರ್ವಜನಿಕರು ಅನಧಿಕೃತವಾಗಿ ನಿಷೇಧಿಸುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಸರಕಾರಕ್ಕೆ ಮನವಿ ಮಾಡಿತ್ತು. ಸರಕಾರಿ ಕಚೇರಿಗಳಲ್ಲಿ ಫೋಟೋ ವಿಡಿಯೊ ಮಾಡುವುದನ್ನು ನಿಷೇಧಿಸಿ ಸರಕಾರ ನಿನ್ನೆ ಅಂದರೆ ಜುಲೈ 15ರಂದು ಆದೇಶ ಹೊರಡಿಸಿ ಕೆಲವೇ ಗಂಟೆಗಳಲ್ಲಿ ನಿನ್ನೆಯೇ ಮತ್ತೆ ಆದೇಶವನ್ನು ಹಿಂಪಡೆದಿದೆ.

ಈ ಬಗ್ಗೆ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ 15.7.2022 ರ ಮಧ್ಯರಾತ್ರಿ ನಿದ್ದೆಗಣ್ಣಿನಲ್ಲಿಯೇ ಆದೇಶ ಹಿಂಪಡೆದಿದ್ದು, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಆದರೆ ಹಿಂಪಡೆದ ಆದೇಶದಲ್ಲಿ ಕನ್ನಡಕ್ಕೆ ಅವಮಾನ ಮಾಡಲಾಗಿದ್ದು, ಕರ್ನಾಟಕಕ್ಕೂ ಅವಮಾನ ಮಾಡಿರುವುದು ನಿದ್ದೆಗಣ್ಣಿನಲ್ಲಿ ಸರಕಾರ ಇದೆ ಎನ್ನುವುದನ್ನು ಸಾಬೀತುಪಡಿಸಿದೆ. ಕರ್ನಾಟಕವನ್ನು ಕರ್ನಾಟಾ ಎಂದು ಎರಡೆರಡು ಬಾರಿ ತಪ್ಪಾಗಿ ಪ್ರಕಟಿಸಿದರೆ, ಪ್ರಸ್ತಾವನೆಯನ್ನು ಪುಸತ್ತಾವನೆ ಎಂದು ಟೈಪಿಸಲಾಗಿದೆ. ಜೊತೆಗೆ ಆದೇಶ ಹಿಂಪಡೆದ ದಿನಾಂಕವನ್ನು ನಮೂದಿಸಿಲ್ಲದಿರುವುದು ಸರಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!