ಕಾರ್ಕಳ : ನಗರದ ಬಂಡಿಮಠದಿಂದ ಬಂಗ್ಲೆಗುಡ್ಡೆ ಜಂಕ್ಷನ್ ಮುಖ್ಯರಸ್ತೆ ಬದಿ ಆವೃತ್ತವಾಗಿದ್ದ ಪೊದೆಯನ್ನು ಕುಕ್ಕುಂದೂರು ಪಂಚಾಯತ್ ವತಿಯಿಂದ ಕಟಾವು ಮಾಡಿ ತೆರವುಗೊಳಿಸಲಾಗಿದೆ. ರಸ್ತೆ ಬದಿ ಚಾಚಿದ್ದ ಪೊದೆ ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿರುವ ಮತ್ತು ಚರಂಡಿಯಲ್ಲಿ ಹೂಳು ತುಂಬಿ ಮಳೆ ನೀರು ಸರಾಗವಾಗಿ ಹರಿದುಹೋಗದಿರುವ ಬಗ್ಗೆ ಜು. 14ರಂದು ನ್ಯೂಸ್ ಕಾರ್ಕಳ ವರದಿ ಪ್ರಕಟಿಸಿತ್ತು. ರಸ್ತೆಯ ಒಂದು ಭಾಗ ಕುಕ್ಕುಂದೂರು ಪಂಚಾಯತ್ ವ್ಯಾಪ್ತಿಯಲ್ಲಿರುವುದರಿಂದ ಜು. 15ರಂದು ಪಂಚಾಯತ್ ವತಿಯಿಂದ ಪೊದೆ ತೆರೆವುಗೊಳಿಸಲಾಯಿತು. ಶೀಘ್ರ ಸ್ಪಂದನೆಗಾಗಿ ಕುಕ್ಕುಂದೂರು ಪಂಚಾಯತ್ ಕುರಿತು ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದರು.
ಈ ರಸ್ತೆಯ ಮತ್ತೊಂದು ಬದಿ ಪುರಸಭೆಗೊಳಪಟ್ಟಿದೆ. ಬಂಡಿ ಮಠದಿಂದ ಜೋಡುರಸ್ತೆಗೆ ಸಾಗುವ ಬಲಬದಿಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆಯೇ ಇಲ್ಲ. ಪೊದೆಗಳು ಬೆಳೆದಿದೆ. ಪುರಸಭೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಬಂಡಿಮಠ – ಜೋಡುರಸ್ತೆ ಚರಂಡಿ ಸುತ್ತ ಹರಡಿದ್ದ ಪೊದೆ ತೆರವು
