ನಿಟ್ಟೆ ಎನ್‌ ಇಗ್ಮಾ – 2022 : ಅಂತರ್‌ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಂಪಿಎಂ ವಿದ್ಯಾರ್ಥಿಗಳು ಪ್ರಥಮ

ನಿಟ್ಟೆ : ಡಾ. ಶಂಕರ್‌ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜು 2022 -23ರ ಸಾಲಿನ ರಾಜ್ಯಮಟ್ಟದ ಅಂತರ್‌ ಕಾಲೇಜು ಎನ್-ಇಗ್ಮಾ ಸಾಂಸ್ಕೃತಿಕ ಮತ್ತು ಮ್ಯಾನೇಜ್ ಮೆಂಟ್‌ ಸ್ಪರ್ಧೆ ಜು.13 ರಿಂದ 14ರವರೆಗೆ ಜರುಗಿತು. ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನೆಯನ್ನು ಚಲನಚಿತ್ರನಟ ವಿನೀತ್‌ ಕುಮಾರ್ ನೆರವೇರಿಸಿದರು. ಅಂತರ್‌ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮೂವತ್ತಕ್ಕಿಂತಲೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಂಪಿಎಂ ಕಾಲೇಜಿನ ವಿದ್ಯಾರ್ಥಿಗಳ ತಂಡ ಸಾಂಸ್ಕೃತಿಕ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ ಮತ್ತು ದ್ವಿತೀಯ ಬಿಕಾಂ ವಿದ್ಯಾರ್ಥಿನಿ ದಿವ್ಯಾರಾಣಿ ಬ್ರೈಡಲ್‌ ಡೆಕೋರೇಶನ್‌ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.error: Content is protected !!
Scroll to Top