ಕಾರ್ಕಳ: ಕುಕ್ಕುಂದೂರು ಗ್ರಾಮದ 3ನೇ ವಾರ್ಡಿನ ಪರಪು 1ನೇ ಅಡ್ಡರಸ್ತೆ ಹದಗೆಟ್ಟು ಹೋಗಿದ್ದು, ರಸ್ತೆ ಅಭಿವೃದ್ಧಿಪಡಿಸದ ಪಂಚಾಯತ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷದಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಈ ರಸ್ತೆ ಹದಗೆಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಾರ್ಡಿನ ಸದಸ್ಯರ ಗಮನಕ್ಕೆ ತಂದರು ರಸ್ತೆಗೆ ದುರಸ್ತಿ ಭಾಗ್ಯ ಸಿಕ್ಕಿಲ್ಲ.
ಕುಕ್ಕುಂದೂರು ಗ್ರಾಮದ ಇತರೆಲ್ಲ ರಸ್ತೆಗಳು ಆಯಾ ವಾರ್ಡಿನ ಸದಸ್ಯರು ನಿಷ್ಪಕ್ಷಪಾತವಾಗಿ ಶ್ರಮವಹಿಸಿ ರಸ್ತೆ ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಆದರೆ ಮೂರನೇ ವಾರ್ಡ್ ಮಾತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ, ಹದಗೆಟ್ಟಿರುವ ಒಂದನೇ ಅಡ್ಡ ರಸ್ತೆ ವಾಹನ ಸವಾರರಿಗೆ ಮಾತ್ರವಲ್ಲ ನಡೆದಾಡಲು ಕೂಡ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ಆಟೋ , ಟ್ಯಾಕ್ಸಿಯವರು ಬರಲು ಒಪ್ಪುತ್ತಿಲ್ಲ. ತುರ್ತು ಸಂದರ್ಭದಲ್ಲಿ ಜನರು ಪರದಾಡಿ ಕಂಗಲಾಗುತ್ತಾರೆ. ಇನ್ನಾದರೂ ವಾರ್ಡ್ ಸದಸ್ಯರು ಇದರ ಬಗ್ಗೆ ಗಮನಹರಿಸಿ ಅನುದಾನವನ್ನು ಬಳಸಿಕೊಂಡು ಈ ರಸ್ತೆಯುನ್ನು ಅಭಿವೃದ್ಧಿಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕುಕ್ಕುಂದೂರು 3ನೇ ವಾರ್ಡಿನ ಹದಗೆಟ್ಟ ರಸ್ತೆ: ದುರಸ್ತಿಗೆ ಜನರ ಒತ್ತಾಯ
