ಹೆಬ್ರಿ : ಯುವಕ ತನ್ನ ಮನೆ ಬಳಿಯ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಜು.13ರಂದು ಬೇಳಂಜೆ ಗ್ರಾಮದ ಕೆಪ್ಪೆಕೆರೆಯ ಈಶ್ವರ ನಗರದಲ್ಲಿ ನಡೆದಿದೆ. ಕೃಷ್ಣ ನಾಯ್ಕ (26ವ.) ಮೃತ ಯುವಕ. ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಕುಸಿದು ಬಿದ್ದ ಅವರನ್ನು ಮನೆಗೆ ಕರೆದುಕೊಂಡು ಬಂದು ಆರೈಕೆ ಮಾಡಲಾಗಿತ್ತು. ರಾತ್ರಿ ವಿಪರೀತ ಎದೆನೋವು ಪ್ರಾರಂಭವಾಗಿ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ : ತೋಟದಲ್ಲಿ ಕುಸಿದು ಬಿದ್ದು ಯುವಕ ಸಾವು
