Sunday, October 2, 2022
spot_img
Homeಸ್ಥಳೀಯ ಸುದ್ದಿಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಬೂಸ್ಟರ್‌ ಡೋಸ್‌

ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಬೂಸ್ಟರ್‌ ಡೋಸ್‌


ಹೊಸದಿಲ್ಲಿ : ದೇಶದಲ್ಲಿ ಕೊರೋನ ಪ್ರಕರಣಗಳ ಏರಿಳಿತ ಮುಂದುವರಿದಿರುವಂತೆ ಸರಕಾರ ಇಂದಿನಿಂದ 18ರಿಂದ 59 ವರ್ಷದವರೆಗಿನ ಎಲ್ಲ ನಾಗರಿಕರಿಗೆ ಶುಕ್ರವಾರದಿಂದ ಉಚಿತ ಬೂಸ್ಟರ್ ಡೋಸ್ ನೀಡಲಿದೆ. ಇದು 75 ದಿನಗಳ ವಿಶೇಷ ಕೋವಿಡ್ ಲಸಿಕೆ ಅಭಿಯಾನದ ಭಾಗವಾಗಿದೆ.
ಸ್ವಾತಂತ್ಯದ 75 ವರ್ಷದ ನಿಮಿತ್ತ ಕೇಂದ್ರ ಸರ್ಕಾರ ವರ್ಷವಿಡೀ ಆಜಾದ್ ಕಿ ಅಮೃತ ಮಹೋತ್ಸವ ಸಂಭ್ರಮಾಚರಣೆ ಮಾಡುತ್ತಿದ್ದು ಇದರ ಅಂಗವಾಗಿ ಮುಂದಿನ 75 ದಿನಗಳವರೆಗೆ ಉಚಿತ ಬೂಸ್ಟರ್ ಡೋಸ್ ನೀಡುತ್ತಿದೆ.
ಜುಲೈ 15ರಿಂದ 75 ದಿನಗಳ ಕಾಲ ಆಜಾದ್ ಕಿ ಅಮೃತ ಮಹೋತ್ಸವ ಕಾರ್ಯಕ್ರಮದಡಿಯಲ್ಲಿ ಉಚಿತ ಕೋವಿಡ್ ಲಸಿಕೆ ಅಭಿಯಾನ ಕೈಗೊಳ್ಳುತ್ತಿದ್ದು 18 ವರ್ಷಕ್ಕಿಂತ ಮೇಲ್ಪಟ್ಟ ದೇಶದ ಎಲ್ಲಾ ನಾಗರಿಕರಿಗೆ ಸರ್ಕಾರಿ ಕೇಂದ್ರಗಳಲ್ಲಿ ಉಚಿತ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.
ಕಾರ್ಕಳದಲ್ಲಿ 1000 ಡೋಸ್‌ ಸ್ಟಾಕ್‌
ಕಾರ್ಕಳ ತಾಲೂಕಿನಾದ್ಯಂತ 1000 ಬೂಸ್ಟರ್‌ ಡೋಸ್‌ ಸ್ಟಾಕ್‌ ಲಭ್ಯವಿದ್ದು, ಬಜಗೋಳಿ 120, ಬೆಳ್ಮಣ್‌ 20, ದೊಂಡೇರಂಗಡಿ 60, ದುರ್ಗಾ 20, ಹಿರ್ಗಾನ 40, ಈದು 60, ಇನ್ನಾ 20, ಇವರ್ತ್ತೂರು 60, ಕಾರ್ಕಳ TH 320, ಕುಕ್ಕುಂದೂರು 160, ಮಾಳ 20, ಮುನಿಯಾಲು 20 ಮತ್ತು ಪಳ್ಳಿ 180 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿತರಣೆಯಾಗಿದೆ. ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ತಾಲೂಕು ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!