Saturday, October 1, 2022
spot_img
Homeಅಂಕಣಆರೋಗ್ಯಧಾರ - ಮಳೆಗಾಲದ ಆರೋಗ್ಯಕ್ಕೆ ಆಯುರ್ವೇದ ಸೂತ್ರ

ಆರೋಗ್ಯಧಾರ – ಮಳೆಗಾಲದ ಆರೋಗ್ಯಕ್ಕೆ ಆಯುರ್ವೇದ ಸೂತ್ರ

ಕಾಲಕ್ಕೆ ತಕ್ಕಂತೆ ಆಹಾರವನ್ನು ಸೇವಿಸಬೇಕು ಎಂದು ಆಯುರ್ವೇದ ಹೇಳುತ್ತದೆ. ಹವಾಮಾನದ ಬದಲಾವಣೆಯ ಜೊತೆಗೆ ನಮ್ಮ ದೇಹದಲ್ಲಿಯೂ ಕೂಡ ಬದಲಾವಣೆ ಆಗುತ್ತದೆ. ಆದ್ದರಿಂದ ಕಾಲಗಳಿಗೆ ಅನುಸಾರವಾಗಿ ನಮ್ಮ ಆಹಾರ ವಿಹಾರ ಬದಲಾಗುತ್ತಿರಬೇಕು.
ಮಳೆಗಾಲದಲ್ಲಿ ನಮ್ಮ ಜೀರ್ಣ ಶಕ್ತಿ ಮಧ್ಯಮವಿರುತ್ತದೆ. ದೇಹಬಲವೂ ಕೂಡ ಮಧ್ಯಮವಿರುವುದರಿಂದ ರೋಗನಿರೋಧಕ ಶಕ್ತಿ ಕುಂದುವುದು. ಆದ್ದರಿಂದ ತಿನ್ನುವ ಆಹಾರದ ಮೇಲೆ ಜಾಗ್ರತೆ ವಹಿಸುವುದು ಅತಿ ಅವಶ್ಯಕ. ಮಳೆಗಾಲದಲ್ಲಿ ವಾತ ದೋಷವು ವೃದ್ಧಿಯಾಗುತ್ತದೆ. ಆದ್ದರಿಂದ ನೋವು ಕಾಣಿಸಿಕೊಳ್ಳುವುದು ಅಧಿಕ. ಈ ಸಮಯದಲ್ಲಿ ತ್ವಚೆಯ ಇನ್ಫೆಕ್ಷನ್ ಕೂಡ ಜಾಸ್ತಿ.

ಸೇವಿಸಬೇಕಾದ ಆಹಾರ
ತರಕಾರಿಯ ಸೂಪ್, ಜೇನುತುಪ್ಪ, ಹಳೆ ಅಕ್ಕಿ, ಗೋಧಿ, ಬಾರ್ಲಿ, ಶುಂಠಿ, ಕರಿಮೆಣಸು, ಬೆಳ್ಳುಳ್ಳಿ ಸೌತೆಕಾಯಿ, ಕುಂಬಳಕಾಯಿ, ಅರಶಿನ, ಹೆಸರುಬೇಳೆ, ಸೈಂಧವ ಲವಣ ಒಳ್ಳೆಯದು. ಸಿಹಿ, ಉಪ್ಪು ಹಾಗೂ ಆಮ್ಲ ರಸವಿರುವ ಆಹಾರ ಮಳೆಗಾಲದಲ್ಲಿ ಸೇವಿಸಬೇಕು. ಇದರಿಂದ ವಾತ ದೋಷವು ಕಡಿಮೆಯಾಗುತ್ತದೆ.

ಯಾವುದು ಸೇವಿಸಬಾರದು
ಅತಿ ಉಷ್ಣ, ಕಷಾಯ ರಸ ಹಾಗೂ ಖಾರ ಕಹಿ ಇರುವ ಆಹಾರ ಸೇವನೆ ಕಡಿಮೆಗೊಳಿಸಿ. ಏಕೆಂದರೆ ಇದರಿಂದ ಜೀರ್ಣ ಶಕ್ತಿ ಕಡಿಮೆಯಾಗುವುದು ಹಾಗೂ ವಾತ ದೋಷ ವೃದ್ಧಿಯಾಗುವುದು. ಗುರು ಆಹಾರ, ಬಟಾಟೆ, ಹುರುಳಿ, ಕೂಲ್ ಡ್ರಿಂಕ್ಸ್, ಐಸ್ಕ್ರೀಮ್, ಕರಿದ ತಿಂಡಿ, ಫ್ರಿಜ್ಜಲ್ಲಿಟ್ಟ ಆಹಾರ ಸೇವಿಸ ಕೂಡದು.

ಮಳೆಗಾಲದಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳು ಹೀಗಿವೆ
• ಮಳೆಗಾಲದಲ್ಲಿ ವಾತ ದೋಷವು ಅಧಿಕವಿರುವುದರಿಂದ ಯಾವುದಾದರೂ ಎಣ್ಣೆ ಹಚ್ಚಿ ಅಭ್ಯಂಗ ಮಾಡುವುದು ಒಳ್ಳೆಯದು.
• ತ್ವಚೆಯ ಇನ್ಫೆಕ್ಷನ್ ಅಧಿಕವಿರುವುದರಿಂದ ಸ್ನಾನದ ನೀರಿಗೆ ಒಂದು ಚಮಚ ಕಹಿ ಬೇವಿನ ಎಣ್ಣೆ ಹಾಕಿ ಸ್ನಾನ ಮಾಡಿ.
• ಸಕ್ಕರೆ ಕಾಯಿಲೆ ಇರುವವರು ಪಾದಗಳ ಆರೈಕೆ ಮುಖ್ಯ. ಕಾಲುಗಳು ಒದ್ದೆಯಾಗದಂತೆ ನೋಡಿಕೊಳ್ಳಬೇಕು.
• ಉಗುರುಗಳನ್ನು ಕತ್ತರಿಸಿ ಇಲ್ಲದಿದ್ದರೆ ಇನ್ಫೆಕ್ಷನ್ ಆಗುವ ಸಂಭವವಿರುತ್ತದೆ.
• ಅಧಿಕ ವ್ಯಾಯಾಮ ಮಾಡಬೇಡಿ.
• ತ್ವಚೆಯ ಇನ್ಫೆಕ್ಷನ್ ತಡೆಯಲು ದೇಹವನ್ನು ಶುಷ್ಕವಾಗಿ ಇಟ್ಟುಕೊಳ್ಳಿ.
• ಮಧ್ಯಾಹ್ನ ನಿದ್ದೆ ಉಚಿತವಲ್ಲ.
• ಮಳೆಗಾಲದಲ್ಲಿ ಬಿಸಿ ನೀರು ಕುಡಿಯುವುದು ಒಳ್ಳೆಯದು.
• ಶುಚಿಯಾದ ಹತ್ತಿ ಬಟ್ಟೆಯನ್ನು ಧರಿಸಿರಿ.
• ಪಂಚಕರ್ಮದಲ್ಲಿ ವಮನ ಹಾಗು ವಿರೇಚನ ಮಳೆಗಾಲದಲ್ಲಿ ಒಳ್ಳೆಯದು.

ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

error: Content is protected !!