ಹೊಸದಿಲ್ಲಿ: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ನೋಟಿಸ್ ಬೋರ್ಡಿನಲ್ಲಿಶ ಶಿಕ್ಷಕರ ಫೋಟೊ ನಿತ್ಯ ಹಾಕುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಉತ್ತಮ ವೇತನ ಪಡೆಯುತ್ತಿದ್ದಾರೆ. ಆದರೆ ಕೆಲವರು ಇನ್ನಿತರ ವ್ಯಾಪಾರ ವಹಿವಾಟುಗಳನ್ನು ಕೂಡ ಹೊಂದಿರುತ್ತಾರೆ. ಇಂಥವರು ತಮ್ಮ ಪರವಾಗಿ ಪಾಠ ಮಾಡಲು ಬಾಡಿಗೆ ಶಿಕ್ಷಕರನ್ನು ನೇಮಕ ಮಾಡಿ ತಮ್ಮ ವಹಿವಾಟುಗಳಿಗೆ ಹೋಗುತ್ತಿರುತ್ತಾರೆ. ಕರ್ನಾಟಕವೂ ಸೇರಿ ಹಲವು ರಾಜ್ಯಗಳಲ್ಲಿ ಇಂಥ ಕೆಲವು ಪ್ರಕರಣಗಳು ವರದಿಯಾದ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಆಯಾ ಶಾಲೆಗಳ ನೋಟಿಸ್ ಬೋರ್ಡಿನಲ್ಲಿ ಶಿಕ್ಷಕರ ಫೋಟೊ ಹಾಕಲು ಅವಕಾಶ ಕಲ್ಪಸಲು ನಿರ್ಧರಿಸಲಾಗಿದೆ.
ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ಶಿಕ್ಷಕರು ನಿರಂತರ ಗೈರು ಹಾಜರಾಗುತ್ತಿರುವ ಹಾಗೂ ಬಾಡಿಗೆ ಶಿಕ್ಷಕರ ಮೂಲಕ ಪಾಠ ಮಾಡಿಸುತ್ತಿರುವ ಬಗ್ಗೆ ಗಮನ ಸೆಳೆಯಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಯಾರು ನಿಜವಾದ ಶಿಕ್ಷಕ ಎಂದು ತಿಳಿಸುವ ಸಲುವಾಗಿ ನೋಟಿಸ್ ಬೋರ್ಡಿನಲ್ಲಿ ಶಿಕ್ಷಕರ ಫೊಟೊ ಹಾಕಲು ನಿರ್ಧರಿಸಲಾಗಿದೆ.
ದೇಶದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 9.68 ಕೋಟಿ ಶಿಕ್ಷಕರು ಇದ್ದಾರೆ. ಈ ಪೈಕಿ ಶೇ.10ರಷ್ಟು ಶೀಕ್ಷಕರು ಬಾಡಿಗೆ ಶಿಕ್ಷಕರ ಮೂಲಕ ಪಾಠ ಮಾಡಿಸುತ್ತಿರುವ ವಿಚಾರ ಪತ್ತೆಯಾಗಿದೆ.
