Saturday, October 1, 2022
spot_img
Homeಸುದ್ದಿ2013-18 ಅವಧಿಯಲ್ಲೂ ಪಿಎಸ್‌ಐ ನೇಮಕಾತಿ ಹಗರಣ?

2013-18 ಅವಧಿಯಲ್ಲೂ ಪಿಎಸ್‌ಐ ನೇಮಕಾತಿ ಹಗರಣ?

ಬೆಂಗಳೂರು: ಎಪ್ಪತ್ತೈದನೇ ಹುಟ್ಟುಹಬ್ಬ ಆಚರಣೆ ಸಿದ್ದರಾಮೋತ್ಸವದ-2022 ಸಂಭ್ರಮದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗುವಂಥ ಬೆಳವಣಿಗೆ ನಡೆಯುವ ಸಾಧ್ಯತೆಯಿದೆ. ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕುವ ಪ್ರಯತ್ನವೊಂದು ನಡೆಯುತ್ತಿದೆ ಎಂದು ಮೂಲವೊಂದು ತಿಳಿಸಿದೆ.
ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿ ಸೆರೆಯಾಗಿರುವ ಡಿವೈಎಸ್‌ಪಿ ಶಾಂತಕುಮಾರ್‌ 2013ರಿಂದ 2018ರ ವರೆಗೆ ನಡೆದ ಪಿಎಸ್‌ಐ ನೇಮಕಾತಿಯಲ್ಲೂ ಅವ್ಯವಹಾರ ನಡೆದಿರುವ ಬಗ್ಗೆ ಬಾಯಿಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಮಾಜಿ ಐಪಿಎಸ್‌ ಅಧಿಕಾರಿಯೊಬ್ಬರು ಇದರಲ್ಲಿ ನೇರವಾಗಿ ಶಾಮಿಲಾಗಿದ್ದಾರೆ ಎಂದು ವಿಚಾರಣೆ ವೇಳೆ ಅವರು ಸಿಐಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಹೇಳೆಕೆಯನ್ನು ಆಧರಿಸಿ ಸಿಐಡಿ ಆ ಮಾಜಿ ಐಪಿಎಸ್‌ ಅಧಿಕಾರಿಯನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಹೀಗಾದರೆ ಇದು ಸಿದ್ದರಾಮಯ್ಯನವರಿಗಾಗುವ ಹಿನ್ನಡೆ ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಂಗ್ರೆಸ್‌ ಸರಕಾರದ ಕಾಲದಲ್ಲಿ ನಡೆದಿರುವ ಹರಣವನ್ನು ಬಯಲಿಗೆಳೆಯುವುದಾಗಿ ಹೇಳಿದ್ದರು.
2013ರಿಂದ 2018ರವರೆಗೆ ನಡೆದಿದ್ದ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಮಧುಕರ್​ ಶೆಟ್ಟಿ ವರದಿ ಕೊಟ್ಟಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ಮೂರು ಹಂತದ ಪಿಎಸ್‌ಐ ನೇಮಕಾತಿ ನಡೆದಿತ್ತು. ಇದರಲ್ಲಿ ಅಕ್ರಮ ನಡೆಸಿದ್ದ ಬಗ್ಗೆ ವರದಿ ನೀಡಲಾಗಿತ್ತು. ಮಧುಕರ್​ ಶೆಟ್ಟಿ ವರದಿಯನ್ನ ಗೃಹ ಇಲಾಖೆಯಿಂದ ಮುಚ್ಚಿಡಲಾಗಿತ್ತು. ಆಗಿನ ಐಜಿಪಿ ಕೂಡಾ ಪ್ರಕರಣವನ್ನು ಮುಚ್ಚಿಹಾಕಿದ್ದರು ಎಂಬುದಾಗಿ ಶಾಂತಕುಮಾರ್‌ ಸಿಐಡಿಗೆ ತಿಳಿಸಿದ್ದಾರೆಂದು ವರದಿಯಾಗಿದೆ. ಈ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪ್ರಸ್ತುತ ಸಾಕ್ಷ್ಯ ಸಂಗ್ರಹಿಸುತ್ತಿದೆ.

LEAVE A REPLY

Please enter your comment!
Please enter your name here

Most Popular

error: Content is protected !!