Sunday, October 2, 2022
spot_img
Homeಸುದ್ದಿಮೋದಿ ಹತ್ಯೆಗೆ ಸಂಚು: ಇಬ್ಬರ ಬಂಧನ

ಮೋದಿ ಹತ್ಯೆಗೆ ಸಂಚು: ಇಬ್ಬರ ಬಂಧನ


ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಗೆ ಹತ್ಯೆಗೆ ಸಂಚು ಮಾಡಿದ್ದ ಇಬ್ಬರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಜು.12ರಂದು ಮೋದಿ ಬಿಹಾರ ಪ್ರವಾಸ ಕೈಗೊಂಡ ವೇಳೆ ಅವರನ್ನು ಹತ್ಯೆ ಮಾಡುವ ಯೋಜೆಯನ್ನು ಸೆರೆಯಾಗಿರುವ ಉಗ್ರರು ರೂಪಿಸಿದ್ದರು. ಆದರೆ ಅದನ್ನು ಕಾರ್ಯಗತಗೊಳಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಅವರು ಶಂಕಿತ ಉಗ್ರ ಸಂಚಿನ ಭಾಗವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ತರ್‌ ಪರ್ವೇಜ್‌ ಮತ್ತು ಮೊಹಮ್ಮದ್‌ ಜಲಾಲುದ್ದೀನ್‌ ಸೆರೆಯಾಗಿರುವ ಉಗ್ರರು. 2047ರ ವೇಳೆಗೆ ಭಾರತವನ್ನು ಮುಸ್ಲಿಂ ದೇಶವನ್ನಾಗಿ ಮಾಡುವ ಧ್ಯೇಯದಿಂದ ತಾವು ಕೆಲಸ ಮಾಡುತ್ತಿರುವುದಾಗಿ ಅವರು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ಮೋದಿ ಭೇಟಿಗೆ 15 ದಿನ ಮುಂಚಿತವಾಗಿ ಪಾಟ್ನಾದ ಹೊರವಲಯದ ಫುಲ್ವಾರಿ ಶರೀಫ್‌ ಎಂಬಲ್ಲಿ ಅವರು ಉಗ್ರ ತರಬೇತಿ ಪಡೆದುಕೊಂಡಿದ್ದರು. ಜು.6 ಮತ್ತು 7ರಂದು ಅವರು ಸಮಾಲೋಚನೆಗಳನ್ನೂ ನಡೆಸಿದ್ದರು. ಫುಲ್ವಾರ ಶರೀಫ್‌ಗೆ ದಾಳಿ ಮಾಡಿರುವ ಪೊಲೀಸರು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿ ಪಿಎಫ್‌ಐಯ 25 ಕರಪತ್ರಗಳು ಸಿಕ್ಕಿವೆ. ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ ರಾಜ್ಯಗಳ ಯುವಕರು ಫುಲ್ವಾರ ಶರೀಫ್‌ನಲ್ಲಿ ತರಬೇತಿ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!