ಕಾರ್ಕಳ : ಬೆಳ್ಮಣ್ ಗ್ರಾಮದಲ್ಲಿ ಗುರುವಾರ ಬೀಸಿದ ಭಾರಿ ಗಾಳಿಗೆ ಪಡು ಬೆಳ್ಮಣ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೇಲ್ಛಾವಣಿ ಬಿದ್ದಿದೆ. ಹಾನಿಯಿಂದ ಸುಮಾರು 12 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಇದೇ ಗ್ರಾಮದ ಸುರೇಂದ್ರ ಎಂಬವರ ಹಟ್ಟಿಗೆ ಮರ ಬಿದ್ದು 30 ಸಾವಿರ ರೂ. ನಷ್ಟವಾಗಿದೆ. ಕಾರ್ಕಳ ಕಾಳಿಕಾಂಬಾ ನಿವಾಸಿ ವಿಜಯ ಎಂಬವರ ವಾಸದ ಮನೆಗೆ ಮರ ಬಿದ್ದು 30 ಸಾವಿರ ರೂ. ನಷ್ಟ ಸಂಭವಿಸಿದೆ.
