Sunday, October 2, 2022
spot_img
Homeಸುದ್ದಿವೃತ್ತಿ ಕೌಶಲ ಉಪಕರಣಗಳಿಗೆ ಅರ್ಜಿ ಆಹ್ವಾನ

ವೃತ್ತಿ ಕೌಶಲ ಉಪಕರಣಗಳಿಗೆ ಅರ್ಜಿ ಆಹ್ವಾನ

ಕಾರ್ಕಳ: ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ವೃತ್ತಿನಿರತ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಕುಶಲಕರ್ಮಿಗಳಿಗೆ ವೃತ್ತಿಪರ ಯೋಜನೆಯಡಿ ವಿವಿಧ ಕಸುಬುಗಳಾದ ಗಾರೆಕೆಲಸ, ಮರಗೆಲಸ, ದೋಬಿ, ಬ್ಯೂಟಿಪಾರ್ಲರ್, ಕ್ಷೌರಿಕ, ಕಮ್ಮಾರಿಕೆ, ಪ್ಲಂಬರ್, ಇಲೆಕ್ಟ್ರಿಶಿಯನ್ ಹಾಗೂ ಟೈಲರಿಂಗ್ ವೃತ್ತಿಯ ಉಪಕರಣಗಳನ್ನು ಉಚಿತವಾಗಿ ನೀಡಲಾಗುವುದು. ಉಪಕರಣಗಳನ್ನು ಪಡೆಯಲಿಚ್ಛಿಸುವ ಗ್ರಾಮೀಣ ಪ್ರದೇಶದ ಅರ್ಜಿದಾರರು (ಕುಟುಂಬದ ಒಬ್ಬ ಸದಸ್ಯರು ಮಾತ್ರ ಅರ್ಜಿ ನಮೂನೆಯನ್ನು ಕಚೇರಿಯಿಂದ/ಆಯಾ ಗ್ರಾಮ ಪಂಚಾಯತ್‌ಗಳಿಂದ ಪಡೆದು ಆ.10ರೊಳಗೆ ಗ್ರಾಮ ಪಂಚಾಯತ್ ದೃಢೀಕರಣದೊಂದಿಗೆ ಉಪ ನಿರ್ದೇಶಕರು, ಗ್ರಾಮಾಂತರ ಕೈಗಾರಿಕೆ, ಬಿ ಬ್ಲಾಕ್ ರೂಂ.ನಂ.207 ಮೊದಲನೇ ಮಹಡಿ, ರಜತಾದ್ರಿ, ಮಣಿಪಾಲ ಕಚೇರಿಗೆ ಸಲ್ಲಿಸಬೇಕು. 2020-21ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಉಪಕರಣ ಮಂಜೂರಾಗದ ಅಭ್ಯರ್ಥಿಗಳು ಮನ: ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಗ್ರಾಮಾಂತರ ಕೈಗಾರಿಕೆ, ಜಿಲ್ಲಾ ಪಂಚಾಯತ್‌ ಉಪ ನಿರ್ದೇಶಕ ಜಿ. ವಾಮನ ನಾಯ್ಕ ಅವರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!