Saturday, October 1, 2022
spot_img
Homeಸುದ್ದಿಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕಾರ್ಕಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಕಾರ್ಕಳ, ಇದರ 2021ರ ವಾರ್ಷಿಕ ಮಹಾಸಭೆ ದಿನಾಂಕ ಆ.7 ರಂದು ಪೂರ್ವಾಹ್ನ 9.30ಕ್ಕೆ ನೌಕರರ ಭವನ ಬಂಡಿಮಠ ಕಾರ್ಕಳ ಇಲ್ಲಿ ನಡೆಯಲಿರುವುದು. ಅಂದು ಸರಕಾರಿ ನೌಕರರ ಮಕ್ಕಳಿಗೆ 2020-21 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.95 ಮೇಲ್ಪಟ್ಟು ಮತ್ತು ಯಾವುದೇ ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ.85 ಮೇಲ್ಪಟ್ಟು ಅಂಕಗಳಿಸಿದ ಇಬ್ಬರಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನ ಇರುವುದರಿಂದ (ಸ್ನಾತಕೋತ್ತರ ಪದವಿ ಪಡೆದವರಿಗೆ ಅವಕಾಶ ಇರುವುದಿಲ್ಲ) ವಿದ್ಯಾರ್ಥಿಗಳ ದೃಢೀಕೃತ ಅಂಕಪಟ್ಟಿ, ಮೊಬೈಲ್ ಸಂಖ್ಯೆ, ಇತ್ತೀಚೆಗಿನ ಭಾವಚಿತ್ರ, ತಂದೆ ಯಾ ತಾಯಿ ರಾಜ್ಯ ಸರಕಾರಿ ನೌಕರರಾಗಿದ್ದು ತಾವು ಕಾರ್ಯ ನಿರ್ವಹಿಸುವ ಕಚೇರಿಯಿಂದ ಸೇವಾ ದೃಢೀಕರಣ ಪ್ರಮಾಣಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ವಿಶೇಷ ಸಾಧನೆ ಮಾಡಿದ ನೌಕರರಿಗೆ ಮತ್ತು ಅವರ ಮಕ್ಕಳಿಗೆ ಪುರಸ್ಕಾರ ಹಾಗೂ 2021ರ ಜನವರಿಯಿಂದ 2022ರ ಜುಲೈ 31ರ ನಡುವೆ ನಿವೃತ್ತರಾಗಿರುವ ಸರಕಾರಿ ನೌಕರರಿಗೆ ಸನ್ಮಾನ ನಡೆಯಲಿದ್ದು, ಸನ್ಮಾನಿತರ ವಿವರಗಳನ್ನು ಜು.27ರ ಒಳಗಾಗಿ ಸಂಘದ ಅಧ್ಯಕ್ಷ ಬಾಲಕೃಷ್ಣ ಎನ್. ಮೊ: 9901445897, ಕಾರ್ಯದರ್ಶಿ ಉಮೇಶ್ ಕೆ.ಎಸ್. ಮೊ: 9449991735, ಸಂಘಧ ರಾಜ್ಯ ಪರಿಷತ್ ಸದಸ್ಯ ರಾಜಾರಾಮ ಶೇರ್ವೆಗಾರ್ ಮೊ: 9449510200, ಖಜಾಂಚಿ ವಿನೋದ್ ನಾಯ್ಕ್ ಮೊ: 9632589560 ಈ ನಾಲ್ವರಲ್ಲಿ ಯಾರಲ್ಲಾದರೂ ಒಬ್ಬರಿಗೆ ನೀಡುವಂತೆ ಕೋರಲಾಗಿದೆ. ಕಾರ್ಯಕ್ರಮದಲ್ಲಿ ಎಲ್ಲಾ ಸರಕಾರಿ ನೌಕರರು ಹಾಜರಿರುವಂತೆ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಎನ್. ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!