Friday, August 19, 2022
spot_img
Homeಸುದ್ದಿಸುಶಾಂತ್‌ ಸಿಂಗ್‌ ರಜಪೂತ್‌ ಡ್ರಗ್‌ ವ್ಯಸನಿಯಾಗುವಂತೆ ಮಾಡಿದ್ದು ರಿಯಾ

ಸುಶಾಂತ್‌ ಸಿಂಗ್‌ ರಜಪೂತ್‌ ಡ್ರಗ್‌ ವ್ಯಸನಿಯಾಗುವಂತೆ ಮಾಡಿದ್ದು ರಿಯಾ

*ಎನ್‌ಸಿಬಿ ದೋಷಾರೋಪ ಪಟ್ಟಿಯಲ್ಲಿ ನಟಿಯ ವಿರುದ್ಧ ಡ್ರಗ್‌ ಖರೀದಿಸಿ ಪೂರೈಸಿದ ಆರೋಪ
ಮುಂಬಯಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯ ಶಂಕಿತ ಆರೋಪಿಯಾಗಿದ್ದ ನಟನ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೊ (ಎನ್‌ಸಿಬಿ) ಪೊಲೀಸರು ಸುಶಾಂತ್‌ಗೆ ಮಾದಕ ವಸ್ತು ತಂದುಕೊಟ್ಟು ಆತ ಡ್ರಗ್‌ ವ್ಯಸನಿಯಾಗಲು ಕುಮ್ಮಕ್ಕು ಕೊಟ್ಟ ಪ್ರಕರಣ ದಾಖಲಿಸಿದ್ದಾರೆ.
ಸುಶಾಂತ್‌ ಸಿಂಗ್‌ ರಜಪೂತ್‌ ಮೃತದೇಹ 2020, ಜೂ.14ರಂದು ಬಾಂದ್ರದಲ್ಲಿರುವ ಫ್ಲ್ಯಾಟಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಆತ್ಮಹತ್ಯೆ ಬಳಿಕ ಬಾಲಿವುಡ್‌ ತಾರೆಯರ ಮಾದಕ ವಸ್ತು ವ್ಯಸನದ ಕರಾಳ ಮುಖ ಅನಾವರಣಗೊಂಡಿದೆ. ಹಲವು ಖ್ಯಾತ ತಾರೆಯರು ವಿಚಾರಣೆ ಎದುರಿಸಿದ್ದಾರೆ.
ಸುಶಾಂತ್‌ ಇಸಂಗ್‌ ಪ್ರಕರಣದಲ್ಲಿ 35 ಆರೋಪಿಗಳ ವಿರುದ್ಧ ಎನ್‌ಸಿಬಿ ಒಟ್ಟು 38 ದೋಷಾರೋಪಗಳನ್ನು ಹೊರಿಸಿದೆ. 10ನೇ ಆರೋಪಿಯಾಗಿರುವ ನಟಿ ರಿಯಾ ಚಕ್ರವರ್ತಿ ಡ್ರಗ್‌ ಪೂರೈಕೆದಾರರಾದ ಸಾಮುವೆಲ್‌ ಮಿರಾಂಡ, ಶೋವಕ್‌ ಚಕ್ರವರ್ತಿ ಮತ್ತು ದೀಪೇಶ್‌ ಸಾವಂತ್‌ ಎಂಬವರಿಂದ ಅನೇಕ ಸಲ ಡ್ರಗ್‌ ಖರೀದಿ ಮಾಡಿ ಸುಶಾಂತ್‌ ಸಿಂಗ್‌ ರಜಪೂತ್‌ಗೆ ಪೂರೈಸಿದ್ದಾರೆ. ಈ ಮೂಲಕ ನಟ ಡ್ರಗ್‌ ವ್ಯಸನಿಯಾಗುವಂತೆ ಮಾಡಿದ್ದರು. ಡ್ರಗ್‌ ಖರೀದಿಸಿ ಪೂರೈಸುವ ವ್ಯವಸ್ಥಿತ ಜಾಲದ ಷಡ್ಯಂತ್ರದ ಭಾಗವಾಗಿ ರಿಯಾ ಕಾರ್ಯವೆಸಗಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!