Saturday, October 1, 2022
spot_img
Homeಸುದ್ದಿಹೆಬ್ರಿಯ ಯುವತಿ ನಾಪತ್ತೆ

ಹೆಬ್ರಿಯ ಯುವತಿ ನಾಪತ್ತೆ

ಹೆಬ್ರಿ: ಹೆಬ್ರಿಯ ನಾಡ್ಪಾಲು ಗ್ರಾಮದ ಸೀತಾನದಿ ಬಂಡಿಮಠದ ಚೈತ್ರಾ (19) ಎಂಬ ಯುವತಿ ನಿನ್ನೆಯಿಂದ ನಾಪತ್ತೆಯಾಗಿರುವ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳವಾರ ಬೆಳಗ್ಗೆ 10.30ಕ್ಕೆ ಅಂಗಡಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಚೈತ್ರಾ ಮಧ್ಯಾಹ್ನ 12.30 ಆದರೂ ವಾಪಸಾಗಿರಲಿಲ್ಲ.ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು.ಸಂಬಂಧಿಕರಲ್ಲಿ ಮತ್ತು ಕಾಲೇಜಿನಲ್ಲಿ ವಿಚಾರಿಸಿದಾಗ ಅಲ್ಲಿಗೂ ಹೋಗಿಲ್ಲ ಎಂದು ತಿಳಿದ ಬಳಿಕ ಮನೆಯವರು ನಾಪತ್ತೆ ದೂರು ದಾಖಲಿಸಿದ್ದಾರೆ. ಸಾಧಾರಣ ಮೈಕಟ್ಟಿನ, ಎಣ್ಣೆಕಪ್ಪು ಮೈಬಣ್ಣದ ಚೈತ್ರಾ ಮನೆಯಿಂದ ಹೊರಡುವಾಗ ಕಪ್ಪುಬಣ್ಣದ ಚೂಡಿದಾರ ಧರಿಸಿದ್ದರು. ಕನ್ನಡ ಮಾತನಾಡುತ್ತಾರೆ.ಕಂಡುಬಂದರೆ ಹೆಬ್ರಿ ಪೊಲೀಸ್‌ ಠಾಣೆಯನ್ನು 08253-251116 ನಂಬರ್‌ನಲ್ಲಿ ಸಂಪರ್ಕಿಸಲು ಪೊಲೀಸರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!