ಗುಜರಾತ್‌ ಗಲಭೆ: ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಮತ್ತೆ ಬಂಧನ

ಅಹ್ಮದಾಬಾದ್‌: ಗುಜರಾತಿನಲ್ಲಿ 2002ರಲ್ಲಿ ಸಂಭವಿಸಿದ ಕೋಮು ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಗ್ಧರನ್ನು ಸಿಲುಕಿಸಲು ಯತ್ನಿಸಿದ ಆರೋಪದಲ್ಲಿ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಬಂಧಿಸಿದೆ.
ಸುಪ್ರೀ ಕೋರ್ಟ್‌ ಹಿಂದಿನ ಗುಜರಾತ್‌ ಮುಖ್ಯಮಂತ್ರಿ ಈಗ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರಿಗೆ ಗಲಭೆ ಪ್ರಕರಣಗಳಿಗೆ ಸಂಬಂಧಿಸಿ ಇತ್ತೀಚೆಗೆ ಕ್ಲೀನ್‌ ಚಿಟ್‌ ನೀಡಿದ ಬಳಿಕ ಸೆರೆಯಾಗುತ್ತಿರುವ ಮೂರನೇ ವ್ಯಕ್ತಿ ಸಂಜೀವ್‌ ಭಟ್‌. ಈ ಮೊದಲು ಸಾಮಾಜಿಕ ಕಾರ್ಯಕರ್ತೆ ಎನ್ನುತ್ತಿರುವ ತೀಸ್ತಾ ಸೆಟಲ್ವಾಡ್‌ ಮತ್ತು ಗುಜರಾತಿನ ಮಾಜಿ ಡಿಜಿಪಿ ಆರ್‌.ಬಿ.ಶ್ರೀಕುಮಾರ್‌ ಅವರನ್ನು ಬಂಧಿಸಲಾಗಿದೆ. ಇವರೆಲ್ಲ ಗಲಭೆಗೆ ಸಂಬಂಧಿಸಿ ಮೋದಿಗೆ ಮತ್ತು ಬಿಜೆಪಿಗೆ ಕಳಂಕ ಮೆತ್ತಲು ರಚನೆಗೊಂಡ ಷಡ್ಯಂತ್ರದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು ಎಂಬ ಆರೋಪವಿದೆ.
ಈಗಾಗಲೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಪಾಲನ್‌ಪುರ ಜೈಲಿನಲ್ಲಿದ್ದ ಸಂಜೀವ್‌ ಭಟ್‌ ಅವರನ್ನು ಟ್ರಾನ್ಸಿಟ್‌ ವಾರಂಟ್‌ ಮೇಲೆ ಎಸ್‌ಐಟಿ ವಶಕ್ಕೆ ತೆಗೆದುಕೊಂಡಿದೆ. 1996ರಲ್ಲಿ ಗುಜರಾತಿನ ಬನಸ್‌ಕಾಂತ ಜಿಲ್ಲೆಯಲ್ಲಿ ವಕೀಲರೊಬ್ಬರನ್ನು ಮಾದಕ ವಸ್ತು ಹೊಂದಿದ ಸುಳ್ಳು ಆರೋಪದಲ್ಲಿ ಬಂಧಿಸಿ ಹಿಂಸಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಂಜೀವ್‌ ಭಟ್‌ ಜೈಲಿನಲ್ಲಿದ್ದಾರೆ.ಇದಕ್ಕೂ ಮೊದಲು ಲಾಕಪ್‌ ಡೆತ್‌ ಪ್ರರಕಣವೊಂದರಲ್ಲಿ ಸಂಜೀವ್‌ ಭಟ್‌ಎಗ ಜೀವಾವಧಿ ಶಿಕ್ಷೆಯಾಗಿತ್ತು.





























































































































































































































error: Content is protected !!
Scroll to Top