Wednesday, August 17, 2022
spot_img
Homeಕ್ರೀಡೆಇಂಗ್ಲೆಂಡ್‌ಗೆ ಸಿಂಹಸ್ವಪ್ನವಾದ ಬುಮ್ರಾ

ಇಂಗ್ಲೆಂಡ್‌ಗೆ ಸಿಂಹಸ್ವಪ್ನವಾದ ಬುಮ್ರಾ

ಲಂಡನ್‌ : ಜಸ್‌ಪ್ರೀತ್‌ ಬುಮ್ರಾ (19ಕ್ಕೆ 6) ಅವರ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ಹಾಗೂ ರೋಹಿತ್‌ ಶರ್ಮಾ (76*) ಅರ್ಧಶತಕದ ಸಹಾಯದಿಂದ ಭಾರತ ತಂಡ ಮೊದಲನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
ಟಾಸ್‌ ಗೆದ್ದು ಚೇಸಿಂಗ್‌ ಆಯ್ದುಕೊಂಡ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ನಿರ್ಧಾರವನ್ನು ಭಾರತ ತಂಡದ ಬೌಲರ್‌ಗಳ ಸಮರ್ಥಿಸಿಕೊಂಡರು. ಅದರಲ್ಲೂ ವಿಶೇಷವಾಗಿ ಜಸ್‌ಪ್ರೀತ್‌ ಬುಮ್ರಾ ಇನ್‌ಸ್ವಿಂಗ್‌, ಔಟ್‌ ಸ್ವಿಂಗ್‌, ಸೀಮ್ ಬೌಲಿಂಗ್‌, ಯಾರ್ಕರ್‌ ಮತ್ತು ಆಫ್‌ ಕಟರ್‌ ಹೀಗೆ ಹಲವು ಅಸ್ತ್ರಗಳ ಪ್ರಯೋಗ ಮಾಡಿ ಇಂಗ್ಲೆಂಡ್‌ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾದ ಬಲಗೈ ವೇಗಿ ಬುಮ್ರಾ, ಆರು ವಿಕೆಟ್‌ ಉರುಳಿಸಿ ಆತಿಥೇಯರನ್ನು 110 ರನ್‌ಗಳಿಗೆ ಆಲ್‌ಔಟ್‌ ಮಾಡಿದರು.
ಜೇಸನ್‌ ರಾಯ್‌, ಜೋ ರೂಟ್‌ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರನ್ನು ಶೂನ್ಯಕ್ಕೆ ಔಟ್‌ ಮಾಡಿದ್ದ ಜಸ್‌ಪ್ರೀತ್‌ ಬುಮ್ರಾ, ಜಾನಿ ಬೈರ್‌ಸ್ಟೋವ್‌(7), ಡೇವಿಡ್‌ ವಿಲ್ಲೀ(21) ಹಾಗೂ ಬ್ರೈಡನ್ ಕಾರ್ಸೆ(15) ಅವರನ್ನೂ ಕಟ್ಟಿಹಾಕುವ ಮೂಲಕ ಇಂಗ್ಲೆಂಡ್‌ಗೆ ಮರ್ಮಾಘಾತ ನೀಡಿದರು. ಒಟ್ಟು 7.2 ಓವರ್‌ ಬೌಲ್‌ ಮಾಡಿದ ಯಾರ್ಕರ್‌ ಕಿಂಗ್‌ ಕೇವಲ 19 ರನ್‌ ನೀಡಿ 6 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಜಸ್‌ಪ್ರೀತ್‌ ಬುಮ್ರಾಗೆ ಸಾಥ್‌ ನೀಡಿದ ಮೊಹಮ್ಮದ್‌ ಶಮಿ 7 ಓವರ್‌ಗಳಿಗೆ 31 ರನ್‌ ನೀಡುವ ಮೂಲಕ ಪ್ರಮುಖ ಮೂರು ವಿಕೆಟ್‌ಗಳನ್ನು ಕಿತ್ತರೆ, ಪ್ರಸಿಧ್‌ ಕೃಷ್ಣ ಇನ್ನುಳಿದ ಒಂದು ವಿಕೆಟ್‌ ಕಬಳಿಸಿದರು.

ಟಿ20 ಕ್ರಿಕೆಟ್‌ನಲ್ಲಿ ಮತ್ತು ಇಂದು ಪವರ್‌ ಪ್ಲೇ ಓವರ್‌ಗಳಲ್ಲಿ ಭಾರತ ತಂಡ ಅದ್ಭುತವಾಗಿ ಬೌಲಿಂಗ್‌ ಮಾಡಿದೆ. ಜಸ್‌ಪ್ರೀತ್‌ ಬುಮ್ರಾ ಶ್ರೇಷ್ಠ ಹಾಗೂ ವಿಶೇಷ ಬೌಲರ್‌. ಅವರ ಎದುರು ಬ್ಯಾಟ್‌ ಮಾಡುವುದು ಸುಲಭವಲ್ಲ. ಇಂದು ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿದ್ದಾರೆ. ಒತ್ತಾಯ ಪೂರ್ವಕವಾಗಿ ವಿಕೆಟ್‌ ಪಡೆಯುವುದು ಬಹಳಾ ಕಷ್ಟ. ಇಂದು ವಿಕೆಟ್‌ ಪಡೆಯಲು ಅಪಾಯ ತೆಗೆದುಕೊಂಡರು ಸರಿ ವಿಕೆಟ್‌ ಪಡೆಯಿರಿ ಎಂದಷ್ಟೇ ನಮ್ಮ ಬೌಲರ್‌ಗಳಿಗೆ ಹೇಳಿದ್ದೆ ಎಂದು ಬಟ್ಲರ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!