Sunday, October 2, 2022
spot_img
Homeದೇಶಇಂಗ್ಲೆಂಡ್ ಪ್ರಧಾನಿ ಹುದ್ದೆ ರೇಸ್ ನಲ್ಲಿ ಭಾರತ ಮೂಲದ ರಿಷಿ ಸುನಕ್, ಸುಯೆಲ್ಲಾ ಬ್ರಾವರ್‌ಮನ್ ಮುಂಚೂಣಿಯಲ್ಲಿ

ಇಂಗ್ಲೆಂಡ್ ಪ್ರಧಾನಿ ಹುದ್ದೆ ರೇಸ್ ನಲ್ಲಿ ಭಾರತ ಮೂಲದ ರಿಷಿ ಸುನಕ್, ಸುಯೆಲ್ಲಾ ಬ್ರಾವರ್‌ಮನ್ ಮುಂಚೂಣಿಯಲ್ಲಿ

ಲಂಡನ್ : ಭಾರತ ಮೂಲದ ಇಂಗ್ಲೆಂಡಿನ ಮಾಜಿ ಚಾನ್ಸೆಲರ್ ರಿಷಿ ಸುನಕ್, ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್‌ಮನ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಬ್ರಿಟನ್ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರ ಬದಲಿಗೆ ನೇಮಕಗೊಳ್ಳುವ ಪ್ರಧಾನಿ ಹುದ್ದೆಯ 8 ಆಕಾಂಕ್ಷಿಗಳಲ್ಲಿ ಪ್ರಮುಖರಾಗಿದ್ದಾರೆ. ರಿಷಿ ಸುನಕ್‌ ಭಾರತದ ಇನ್‌ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಅವರ ಅಳಿಯ. ಇನ್ನು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್, ಹೊಸ ಚಾನ್ಸೆಲರ್ ನಧಿಮ್ ಜಹಾವಿ, ವಾಣಿಜ್ಯ ಸಚಿವ ಪೆನ್ನಿ ಮೊರ್ಡಾಂಟ್, ಮಾಜಿ ಕ್ಯಾಬಿನೆಟ್ ಮಂತ್ರಿಗಳಾದ ಕೆಮಿ ಬಡೆನೊಚ್ ಮತ್ತು ಜೆರೆಮಿ ಹಂಟ್ ಮತ್ತು ಟೋರಿ ಬ್ಯಾಕ್‌ಬೆನ್‌ಚರ್ ಟಾಮ್ ತುಗೆನ್‌ಧಾಟ್ ಅವರು ಸಹ ಪ್ರಧಾನಿ ಹುದ್ದೆ ರೇಸ್ ನಲ್ಲಿದ್ದಾರೆ.


ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ಕನಿಷ್ಠ 20 ಸಂಸದರ ಬೆಂಬಲ ಅಗತ್ಯವಿದ್ದು, ಅಷ್ಟು ಸಂಸದರು ಬೆಂಬಲ ಸೂಚಿಸಿದರೆ ಮೊದಲ ಸುತ್ತಿನಲ್ಲಿ ಅರ್ಹತೆ ಪಡೆಯುತ್ತಾರೆ. ಇಂದು ಮೊದಲ ಸುತ್ತಿನ ಮತ ಎಣಿಕೆ ನಡೆಯಲಿದೆ. ಇನ್ನು ಎರಡನೇ ಸುತ್ತು ಪ್ರವೇಶಿಸಬೇಕಾದರೆ 30 ಸಂಸದರ ಬೆಂಬಲ ಸಿಗಬೇಕು. ಈಗಾಗಲೇ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದ್ದು 20 ಸಂಸದರ ಬೆಂಬಲ ಗಳಿಸದೆ ಪಾಕಿಸ್ತಾನ ಮೂಲದ ಮಾಜಿ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜವೀದ್ ಮತ್ತು ವಿದೇಶಾಂಗ ಇಲಾಖೆ ಸಚಿವ ರೆಹಮಾನ್ ಖಿಸ್ಟಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ವಾರ ಇಬ್ಬರು ಅಭ್ಯರ್ಥಿಗಳ ಆಯ್ಕೆಯ ಬ್ಯಾಲಟ್ ಮೂಲಕ ಮತದಾನ ಮಾಡುವ ಪ್ರಕ್ರಿಯೆ ಮುಗಿಯದಿದ್ದರೆ ಮುಂದಿನ ವಾರಕ್ಕೆ ಮುಂದೂಡಬಹುದು. ಜು. 21ರಂದು ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಕೊನೆಯ ದಿನವಾಗಿರುತ್ತದೆ.

LEAVE A REPLY

Please enter your comment!
Please enter your name here

Most Popular

error: Content is protected !!