ನಾಗಪುರ: ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ಸಂಚರಿಸುತ್ತಿದ್ದ ಕಾರು ನೂರಾರು ಜನರು ನೋಡುತ್ತಿರುವಂತೆ ಕೊಚ್ಚಿ ಹೋಗಿ ಅದರಲ್ಲಿದ್ದ ಮೂವರು ಸಾವಿಗೀಡಾದ ದುರಂತ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ಇಂದು ಸಂಭವಿಸಿದೆ.
ನದಿ ತುಂಬಿ ಸೇತುವೆ ಮೇಲೆ ಹರಿಯುತ್ತಿದ್ದರೂ ಲೆಕ್ಕಿಸದೆ ಚಾಲಕ ದಾಟಿ ಹೋಗಲು ಪ್ರಯತ್ನಿಸಿದ್ದಾನೆ. ನೂರಾರು ಜನ ಸೇತುವೆಯ ಎರಡೂ ಕಡೆ ನಿಂತು ನೋಡುತ್ತಿರುವಂತೆಯೇ ಕಾರು ನೀರು ಪಾಲಾಗಿದೆ.
ಕಾರಿನಲ್ಲಿದ್ದ ಓರ್ವ ಮಹಿಳೆ ಸೇರಿ ಮೂವರು ಸಾವಿಗೀಡಾಗಿದ್ದಾರೆ.ಸೇತುವೆಯ ಎರಡೂ ಕಡೆ ತಡೆಬೇಲಿ ಇರಲಿಲ್ಲ. ಹೀಗಾಗಿ ನೀರಿನ ರಭಸಕ್ಕೆ ಕಾರು ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಕಾರಿನಲ್ಲಿ ಎಂಟು ಮಂದಿಯಿದ್ದರು. ಮೂವರ ಶವ ಪತ್ತೆಯಾಗಿದೆ. ಮೂವರು ನಾಪತ್ತೆಯಾಗಿದ್ದಾರೆ. ಇಬ್ಬರು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರು ನೀರಿನಲ್ಲಿ ತೇಲಿ ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ.
ನೂರಾರು ಜನರ ಕಣ್ಣೆದುರೇ ಕೊಚ್ಚಿ ಹೋದ ಕಾರು: ಮೂವರು ಸಾವು, ಮೂವರು ನಾಪತ್ತೆ
Recent Comments
ಕಗ್ಗದ ಸಂದೇಶ
on