ಅಹ್ಮದಾಬಾದ್: ಗುಜರಾತಿನ ಮುಂಡ್ರಾ ಬಂದರಿಗೆ ಕಂಟೈನರ್ನಲ್ಲಿ ಬಂದಿದ್ದ 376 ಕೋ.ರೂ. ಮೌಲ್ಯದ 75.3 ಕೆಜಿ ಮಾದಕ ವಸ್ತು ಹೆರಾಯ್ನ್ ಅನ್ನು ಗುಜರಾತಿನ ಭಯೋತ್ಪಾದನೆ ನಿಗ್ರಹ ಘಟಕದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎರಡು ತಿಂಗಳ ಹಿಂದೆಯೇ ಯುಎಇಯಿಂದ ಈ ಕಂಟೈನರ್ ಬಂದರಿಗೆ ಬಂದು ತಲುಪಿತ್ತು. ಪಂಜಾಬಿಗೆ ಈ ಪಾರ್ಸೆಲ್ ಬುಕ್ ಆಗಿತ್ತು.
ಬಂದರಿನಲ್ಲಿ ಅನುಮಾನಾಸ್ಪದವಾದ ಕಂಟೈನರ್ ಇರುವ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ದಾಳಿ ಮಾಡಿದಾಗ ಭಾರಿ ಪ್ರಮಾಣದ ಹೆರಾಯ್ನ್ ಸಿಕ್ಕಿದೆ. ಕಂಟೈನರ್ಲ್ಲಿ 4,000 ಕೆಜಿಯಷ್ಟು ಬಟ್ಟೆ ಇತ್ತು. 450 ಸುರುಳಿಯಾಗಿ ಈ ಬಟ್ಟೆಯನ್ನು ಸುತ್ತಿಡಲಾಗಿತ್ತು. ಈ ಪೈಕಿ 64 ಸುರುಳಿಗಳ ಮಧ್ಯೆ ಉತ್ಕೃಷ್ಟ ಗುಣಮಟ್ಟದ ಹೆರಾಯ್ನ್ ಬಚ್ಚಿಡಲಾಗಿತ್ತು.
ಯುಎಇಯ ಅಜ್ಮಾನ್ನಲ್ಲಿರುವ ಗ್ರೀನ್ ಫಾರೆಸ್ಟ್ ಟ್ರೇಡಿಂಗ್ ಕಂಪನಿ ಎಂಬ ಸಂಸ್ಥೆಯ ಹೆಸರಿನಲ್ಲಿ ಈ ಕಂಟೈನರ್ ಅನ್ನು ಭಾರತಕ್ಕೆ ಕಳುಹಿಸಲಾಗಿದೆ. ಪಶ್ಚಿಮ ಬಂಗಾಳದ ಗಾಂಧಿಧಾಮ್ ಎಂಬ ಸಂಸ್ಥೆ ಈ ಕಂಟೈನರ್ಗೆ ಲ್ಯಾಂಡಿಂಗ್ ಏಜೆಂಟ್ ಆಗಿತ್ತು ಎಂಬ ಅಂಶ ತನಿಖೆಯಿಂದ ತಿಳಿದು ಬಂದಿದೆ.
376 ಕೋ. ರೂ. ಮೌಲ್ಯದ ಹೆರಾಯ್ನ್ ವಶ
Recent Comments
ಕಗ್ಗದ ಸಂದೇಶ
on