Sunday, October 2, 2022
spot_img
Homeಸುದ್ದಿಸುರತ್ಕಲ್‌ನಲ್ಲಿ ಕಾಂಕ್ರೀಟ್‌ ರಸ್ತೆ ಕಡಲ ಪಾಲು; ಅಪಾಯದಲ್ಲಿ ಮನೆಗಳು

ಸುರತ್ಕಲ್‌ನಲ್ಲಿ ಕಾಂಕ್ರೀಟ್‌ ರಸ್ತೆ ಕಡಲ ಪಾಲು; ಅಪಾಯದಲ್ಲಿ ಮನೆಗಳು

ಮಂಗಳೂರು: ಸುರತ್ಕಲ್‌ ಬಳಿ ಕಡಲ್ಕೊರೆತದಿಂದಾಗಿ ಕಾಂಕ್ರೀಟ್‌ ರಸ್ತೆ ಕೊಚ್ಚಿಹೋಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೆರೆ ಹಾನಿ ವೀಕ್ಷಣೆಗೆ ಬರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
ಬೈಕಂಪಾಡಿ ಮೀನಕಳಿಯ ಬಳಿ ಕಡಲ್ಕೊರೆತ ತಡೆಯಲು ಮರಳಿನ ಚೀಲದ ತಡೆಗೋಡೆ ರಾಶಿ ಹಾಕಲಾಗಿತ್ತು. ಆದರೆ ಮಂಗಳವಾರ ದೈತ್ಯ ಅಲೆಗಳು ಅಪ್ಪಳಿಸಿ ಮರಳಿನ ಚೀಲಗಳು ಕೊಚ್ಚಿಕೊಂಡು ಹೋಗಿರುವುದಲ್ಲದೆ ಸುಸಜ್ಜಿತವಾಗಿದ್ದ ಕಾಂಕ್ರೀಟ್‌ ರಸ್ತೆ ಮುರಿದು ಕಡಲು ಪಾಲಾಗಿದೆ. ಇದು ಈ ಭಾಗದ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ಈಗ ಜನರು ಪರ್ಯಾಯ ರಸ್ತೆ ಬಳಸುವುದು ಅನಿವಾರ್ಯವಾಗಿದೆ. ರಸ್ತೆಯಂಚಿನಲ್ಲೇ ಮನೆಗಳು ಇದ್ದು, ಕಡಲಬ್ಬರ ಮುಂದುವರಿದರೆ ಈ ಮನೆಗಳಿಗೂ ಅಪಾಯವಿದೆ.

LEAVE A REPLY

Please enter your comment!
Please enter your name here

Most Popular

error: Content is protected !!