ರೈಲ್ವೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಹೊಸದಿಲ್ಲಿ: ವೆಸ್ಟ್‌ ಸೆಂಟ್ರಲ್ ರೈಲ್ವೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಜುಲೈ 8 ರಿಂದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು 28 ಜುಲೈ 2022 ಎಂದು ಕೊನೆಯ ದಿನವಾಗಿದೆ.
ಒಟ್ಟು 121 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಇವುಗಳಲ್ಲಿ ಸ್ಟೇಷನ್ ಮಾಸ್ಟರ್, ಸ್ಟೇಷನ್ ಕಮರ್ಷಿಯಲ್ ಕಮ್ ಟಿಕೆಟ್ ಮತ್ತು ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಅಕೌಂಟ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳು ಸೇರಿವೆ. NTPC ಗ್ರಾಜುಯೇಟ್ 55 ಹುದ್ದೆಗಳು ಮತ್ತು NTPC 12ನೇ ತರಗತಿ ಪಾಸ್ ಆದವರಿಗೆ 66 ಹುದ್ದೆಗಳು ಇವೆ.
ಹುದ್ದೆಯ ವಿವರಗಳು
ಸ್ಟೇಷನ್ ಮಾಸ್ಟರ್ -8
ಸೀನಿಯರ್ ಕಮರ್ಷಿಯಲ್ ಟಿಕೆಟ್ ಕ್ಲರ್ಕ್ – 38
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 9
ಕಮರ್ಷಿಯಲ್ ಟಿಕೆಟ್ ಕ್ಲರ್ಕ್ – 30
ಕ್ಲರ್ಕ್ ಕಮ್ ಟೈಪಿಸ್ಟ್ – 8
ಟಿಪಿ- 2
ಶೈಕ್ಷಣಿಕ ಅರ್ಹತೆ
ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ 12 ನೇ ತರಗತಿ ಉತ್ತೀರ್ಣನಾಗಿರಬೇಕು. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ನೋಡಬಹುದು.
ವಯೋಮಿತಿ
ವಿವಿಧ ಹುದ್ದೆಗಳಿಗೆ ಬೇರೆಬೇರೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ರೈಲ್ವೆ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಸಾಮಾನ್ಯ ವರ್ಗಕ್ಕೆ 18 ರಿಂದ 42 ವರ್ಷಗಳು, ಒಬಿಸಿ ವರ್ಗಕ್ಕೆ 18 ರಿಂದ 45 ವರ್ಷಗಳು ಮತ್ತು ಎಸ್‌ಸಿ/ಎಸ್‌ಟಿ ವರ್ಗಕ್ಕೆ 18 ರಿಂದ 47 ವರ್ಷಗಳು ಎಂದು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
wcr.indianrailways.gov.in ನಲ್ಲಿ ಅರ್ಜಿ ಸಲ್ಲಿಸಬಹುದು.





























































































































































































































error: Content is protected !!
Scroll to Top