*ಕಾರ್ಕಳ ಪೊಲೀಸ್ ಠಾಣೆ ಮತ್ತು ಕಾರ್ಕಳ ರೋಟರಿ ಸಂಸ್ಥೆಯ ಸಹಯೋಗ
ಕಾರ್ಕಳ: ಕಾರ್ಕಳ ಪೊಲೀಸ್ ಠಾಣೆ ಮತ್ತು ಕಾರ್ಕಳ ರೋಟರಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ “ಮಾದಕ ದ್ರವ್ಯಮುಕ್ತ ಕಾರ್ಕಳ” ಎಂಬ ಅಭಿಯಾನಕ್ಕೆ ಡಿವೈಎಸ್ಪಿ ವಿಜಯ್ ಪ್ರಸಾದ್ ಅವರು ಚಾಲನೆ ನೀಡಿದರು.
ಮಾದಕ ದ್ರವ್ಯ ಒಂದು ಪಿಡುಗು ಅಗಿದ್ದು, ಯುವಜನತೆ ಇದಕ್ಕೆ ಬಲಿಯಾಗಿ ದಾರಿತಪ್ಪದಂತೆ ನೋಡಿಕೊಳ್ಳುವ ಜವಾಬ್ದರಿ ಸಮಾಜದ ಮೇಲಿದೆ ಎಂದು ಹೇಳಿದ ಡಿವೈಎಸ್ಪಿ ವಿಜಯ್ ಪ್ರಸಾದ್ ಈ ಕುರಿತು ಮಾಹಿತಿಯನ್ನು ನೀಡಿದರು. ಸರ್ಕಲ್ ಇನ್ಸ್ಪೆಕ್ಟರ್ ಸಂಪತ್ ಕುಮಾರ್, ನಗರ ಠಾಣಾಧಿಕಾರಿ ಪ್ರಸನ್ನಕುಮಾರ್, ನಗರ ಠಾಣೆಯ ತನಿಖಾಧಿಕಾರಿ ದಾಮೋದರ್ ಉಪಸ್ಥಿತರಿದ್ದರು. ನಗರ ಹಾಗೂ ಗ್ರಾಮಾಂತರ ಠಾಣೆಯ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೋಟರಿ ಸಂಸ್ಥೆ ಕಾರ್ಕಳದ ಅಧ್ಯಕ್ಷ ಮೋಹನ್ ಶೆಣೈ ವೈ. ಸ್ವಾಗತಿಸಿ, ರಮಿತಾ ಶೈಲೇಂದ್ರ ನಿರೂಪಿಸಿ, ಕಾರ್ಯದರ್ಶಿ ಶಿವಕುಮಾರ್ ವಂದಿಸಿದರು.
ಮಾದಕ ದ್ರವ್ಯಮುಕ್ತ ಕಾರ್ಕಳ ಅಭಿಯಾನಕ್ಕೆ ಚಾಲನೆ
Recent Comments
ಕಗ್ಗದ ಸಂದೇಶ
on