Sunday, October 2, 2022
spot_img
Homeಸುದ್ದಿಬೈತಡ್ಕ ದುರಂತ: ಒಂದು ಮೃತದೇಹ 400 ಮೀಟರ್‌ ದೂರದಲ್ಲಿ ಪತ್ತೆ

ಬೈತಡ್ಕ ದುರಂತ: ಒಂದು ಮೃತದೇಹ 400 ಮೀಟರ್‌ ದೂರದಲ್ಲಿ ಪತ್ತೆ

ಕಡಬ: ಕಾಣಿಯೂರು ಸಮೀಪ ಬೈತಡ್ಕದಲ್ಲಿ ಭಾನುವಾರ ಮಧ್ಯರಾತ್ರಿ ಹೊಳೆಗೆ ಕಾರು ಬಿದ್ದು ನಾಪತ್ತೆಯಾಗಿದ್ದ ಇಬ್ಬರು ಯುವಕರ ಪೈಕಿ ಒಬ್ಬನ ಶವ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ಘಟನೆ ಸಂಭವಿಸಿದ ಸ್ಥಳದಿಂದ ಸುಮಾರು 400 ಮೀಟರ್‌ ದೂರದ ಮರಕ್ಕಡ ಜೇಡರಕೇರಿ ಮಂಜಯ್ಯ ಆಚಾರ್ಯ ಎಂಬವರ ಮನೆಯ ಸಮೀಪ ಶವ ಪತ್ತೆಯಾಗಿದೆ.
ಮೃತದೇಹದ ಅಂಗಿ ಕಳಚಿಕೊಂಡು ಹೋಗಿದೆ. ಪ್ಯಾಂಟ್‌ ಇದೆ. ಮರವೊಂದಕ್ಕೆ ಸಿಲುಕಿಕೊಂಡು ನೇತಾಡುವ ಸ್ಥಿತಿಯಲ್ಲಿತ್ತು. ನಿನ್ನೆಯಿಂದ ಮಳೆ ಕಡಿಮೆಯಾಗಿ ಹೊಳೆಯಲ್ಲಿ ನೀರು ಇಳಿದ ಬಳಿಕ ಒಂದು ಮೃತದೇಹ ಗೋಚರಿಸಿದೆ. ಇನ್ನೊಬ್ಬನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

LEAVE A REPLY

Please enter your comment!
Please enter your name here

Most Popular

error: Content is protected !!