ಬೈತಡ್ಕ ದುರಂತ: ಇನ್ನೊಂದು ಮೃತದೇಹ ಪತ್ತೆ

ಕಡಬ : ಕಾಣಿಯೂರು ಹೊಳೆಗೆ ಜಿಗಿದಿದ್ದ ಕಾರಿನಲ್ಲಿದ್ದ ಇನ್ನೋರ್ವ ಯುವಕನ ಮೃತದೇಹ ಕೂಡ ಪತ್ತೆಯಾಗಿದೆ. ಇದರೊಂದಿಗೆ ಕಾರಿನಲ್ಲಿದ್ದ ಇಬ್ಬರೂ ಮೃತಪಟ್ಟಿರುವುದು ದೃಢವಾಗಿದೆ. ಮೊದಲ ಮೃತದೇಹ ಪತ್ತೆಯಾದ ಸುಅಮರು ಮುಕ್ಕಾಲು ತಾಸಿನಲ್ಲಿ ಎರಡನೇ ಮೃತದೇಹವನ್ನು ಪತ್ತೆಹಚ್ಚಲಾಗಿದೆ.
ಇಂದು ಬೆಳಿಗ್ಗೆ 8 ಗಂಟೆ ಸಮೀಪ ಬೈತಡ್ಕ ಸೇತುವೆಯಿಂದ 400 ಮೀಟರ್ ದೂರದ ಮರಕ್ಕಡ ಜೇಡರಕೇರಿ ಮಂಜಯ್ಯ ಆಚಾರ್ಯರ ಮನೆಯ ಬಳಿ ಹೊಳೆಯಲ್ಲಿ ಒಂದು ಮೃತದೇಹ ಪತ್ತೆಯಾಗಿತ್ತು, ಇದೀಗ ಅದರಿಂದ 50 ಮೀಟರ್ ಹಿಂದೆಯೇ ಎರಡನೇ ಮೃತದೇಹವೂ ಪತ್ತೆಯಾಗಿದೆ. ಎರಡೂ ಮೃತದೇಹಗಳು ಊರಿನವರಿಗೆ ಸಿಕ್ಕಿದ್ದು. ಘಟನೆ ನಡೆದು ಮೂರನೇ ದಿನ ಪತ್ತೆಯಾಗಿದೆ.
ಜು. 10 ರಂದು ಬೈತಡ್ಕ ಸೇತುವೆಯಿಂದ ಕಾರು ಪಲ್ಟಿಯಾಗಿ, ಇಬ್ಬರು ವಿಟ್ಲ ಮೂಲದ ಧನುಷ್ ಹಾಗೂ ವಿಟ್ಲ ಕನ್ಯಾನದ ಧನುಷ್ ನೀರು ಪಾಲಾಗಿದ್ದರು. ಈ ಯುವಕರಿಬ್ಬರು ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಕಾರನ್ನು ಜು.10ರಂದು ಮಧ್ಯಾಹ್ನ ಪತ್ತೆ ಹಚ್ಚಲಾಗಿತ್ತು. ಎಸ್‌ಡಿಆರ್‌ಎಫ್ ಎರಡು ದಿನ ಹುಡುಕಾಡಿದರೂ ದೇಹಗಳು ಪತ್ತೆಯಾಗಿರಲಿಲ್ಲ. ಇದೀಗ ಮಳೆ ಕಡಿಮೆ ಆಗಿ ಹೊಳೆಯಲ್ಲಿ ನೀರು ಕಡಿಮೆಯಾದಗ ಮೃತದೇಹಗಳು ಪತ್ತೆಯಾಗಿವೆ.













































































































































































error: Content is protected !!
Scroll to Top