Friday, August 19, 2022
spot_img
Homeಸುದ್ದಿಬೈತಡ್ಕ ಅಪಘಾತ: ಇನ್ನೂ ಪತ್ತೆಯಾಗಿಲ್ಲ ಇಬ್ಬರು ಯುವಕರು

ಬೈತಡ್ಕ ಅಪಘಾತ: ಇನ್ನೂ ಪತ್ತೆಯಾಗಿಲ್ಲ ಇಬ್ಬರು ಯುವಕರು

ಕಡಬ: ಕಾಣಿಯೂರು-ಮಂಜೇಶ್ವರ ಹೆದ್ದಾರಿಯಲ್ಲಿ ಬೈತಡ್ಕ ಎಂಬಲ್ಲಿ ಶನಿವಾರ ರಾತ್ರಿ ಕಾರು ಹೊಳೆಗೆ ಬಿದ್ದ ಪ್ರಕರಣದ ನಿಗೂಢ ಇನ್ನೂ ಬಗೆಹರಿದಿಲ್ಲ. ಕಾರಿನಲ್ಲಿದ್ದರು ಎನ್ನಲಾದ ಇಬ್ಬರು ಯುವಕರು ಇನ್ನೂ ಪತ್ತೆಯಾಗದಿರುವುದು ಆತಂಕ ಮೂಡಿಸಿದೆ.
ಶನಿವಾರ ರಾತ್ರಿ 12.02ರ ಹೊತ್ತಿಗೆ ಕಾರು ತುಂಬಿ ಹರಿಯುತ್ತಿರುವ ಹೊಳೆಗೆ ಧುಮುಕಿರುವುದು ಸಮೀಪದಲ್ಲಿರುವ ಮಸೀದಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರನ್ನು ನಿನ್ನೆಯೇ ನೀರಿನಿಂದ ತೆಗೆದಿದ್ದರೂ ಅದರಲ್ಲಿದ್ದ ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಚೋಮ ನಾಯ್ಕ ಎಂಬವರ ಪುತ್ರ ಧನುಷ್‌(25) ಹಾಗೂ ಆವರ ಸಂಬಂಧಿ ವಿಟ್ಲ ಕನ್ಯಾನ ನಿವಾಸಿ ಧನುಷ್‌(21) ಇನ್ನೂ ಪತ್ತೆಯಾಗಿಲ್ಲ.
ಕಾರು ಹೊಳೆಗೆ ಬೀಳುವ ಕೆಲವೇ ಕ್ಷಣಗಳ ಮೊದಲು ಕನ್ಯಾನದ ಧನುಷ್‌ ಕುಂಡಡ್ಕದ ಧನುಷ್‌ ತಾಯಿಗೆ ಫೋನ್‌ ಮಾಡಿ ನಮ್ಮ ಕಾರಿಗೆ ಲಾರಿ ಡಿಕ್ಕಿಯಾಗಿದೆ. ನಾವು ಬದುಕುಳಿದಿರುವುದು ಹೆಚ್ಚು, ನಮಗೇನೂ ಆಗಿಲ್ಲ, ಬೆಳಗಾಗುವಾಗ ಬರುತ್ತೇವೆ ಎಂದು ಹೇಳಿದ್ದಾರೆ. ಈ ಕರೆ ಹೋಗಿರುವುದು ರಾತ್ರಿ 11.52ಕ್ಕೆ. 11.53ಕ್ಕೆ ಸವಣೂರು ಚೆಕ್‌ಪೋಸ್ಟಿನಲ್ಲಿ ಕಾರು ತಪಾಸಣೆಗೊಳಪಟ್ಟಿದೆ.12.02ಕ್ಕೆ ಕಾರು ಸೇತುವೆಗೆ ಢಿಕಿ ಹೊಡೆದು ಹೊಳೆಗೆ ಬಿದ್ದಿದೆ. ಹೀಗಾಗಿ ಅಪಘಾತ ಸಂಭವಿಸುವಾಗ ಯುವಕರಿಬ್ಬರು ಕಾರಿನೊಳಗೆ ಇರುವ ಸಾಧ್ಯತೆಯಿದೆ ಎಂಬ ಆತಂಕ ಮನೆಯವರನ್ನು ಕಾಡುತ್ತಿದೆ. ಕಾರು ಅಲ್ಲೇ 500 ಮೀಟರ್‌ ದೂರದಲ್ಲಿ ಇತ್ತಯು. ಅದನ್ನು ನಿನ್ನೆ ಮೇಲೆತ್ತಲಾಗಿದೆ.ಆರಂಭದಲ್ಲಿ ಕಾರಿನಲ್ಲಿ ಮೂವರಿದ್ದರು ಎಂದು ಹೇಳಲಾಗಿತ್ತು. ನಂತರ ಮನೆಯವರು ಇಬ್ಬರೇ ಇದ್ದುದನ್ನು ಸ್ಪಷ್ಟಪಡಿಸಿದ್ದಾರೆ. ಇದು ಹಳೇ ಮಾರುತಿ 800 ಕಾರು ಆಗಿದ್ದು, ಅದರ ಮಾಲಕ ಆಷ್ಪಕ್‌ ಎಂದು ದಾಖಲೆಯಲ್ಲಿದೆ. ಈ ಕಾರಿನ ಮಾಲಕತ್ವ ಐದು ಸಲ ಕೈ ಬದಲಾಗಿದೆ. ಅಷ್ಪಕ್‌ ಎಂಬವರು ಐದನೇ ಮಾಲಕ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!