ತಮೋ ರಜೋ ಗುಣ ನಾಶಪಡಿಸಲು ತಪ್ತ ಮುದ್ರಾಧಾರಣೆ : ಬಾಳೆಗಾರು ಶ್ರೀ

ಹೆಬ್ರಿ : ಆಚಾರ್ಯ ಮಧ್ವರು ಹಾಕಿ ಕೊಟ್ಟ ಪರಂಪರೆಯಂತೆ ಚಾತುರ್ಮಾಸ ಪ್ರಾರಂಭದ ಏಕಾದಶಿಯಂದು ಪೀಠಾಧಿಪತಿಗಳಿಂದ ಮುದ್ರಾಧಾರಣೆ ಸ್ವೀಕರಿಸಬೇಕು. ಆಷಾಢ ಮಾಸದ ಶುಕ್ಲಪಕ್ಷ ಏಕಾದಶಿಯಂದು ಸುದರ್ಶನ ಹೋಮ ನಡೆಸಿ ಶಾಸ್ತ್ರೋಕ್ತ ಕ್ರಮದಲ್ಲಿ ಚಕ್ರಾದಿಗಳನ್ನು ಪೂಜಿಸಿ, ಅಭಿಮಾನಿ ದೇವತೆಗಳನ್ನು ಸ್ಮರಿಸಿ, ತಮೋ ರಜೋ ಗುಣಗಳನ್ನು ನಾಶಪಡಿಸುವಂತೆ ಪ್ರಾರ್ಥಿಸಿ, ಏಕಾಗ್ರ ಚಿತ್ತದಿಂದ ಗುರುಗಳಿಂದ ತಪ್ತಮುದ್ರಾಧಾರಣ ಪಡೆದುಕೊಳ್ಳಬೇಕು ಎಂದು ಶ್ರೀಮದ್ ಅಕ್ಷೋಭ್ಯ ತೀರ್ಥರು ಸಂಸ್ಥಾನ ಬಾಳಗಾರು ಮಠಾದೀಶ ಶ್ರೀ ರಘುಭೂಷಣ ತೀರ್ಥ ಶ್ರೀಪಾದರು ಹೇಳಿದರು.
ಅವರು ಅಜೆಕಾರು ಗುಡ್ಡೆಅಂಗಡಿ ವೇದಮೂರ್ತಿ ರಾಘವೇಂದ್ರ ಭಟ್ ಇವರ ಮನೆಯಲ್ಲಿ ಪ್ರಥಮ ಏಕಾದಶಿ ಭಾನುವಾರ ಅಜೆಕಾರು – ಹೆಬ್ರಿ ಪರಿಸರದ ನೂರಾರು ಭಕ್ತಾದಿಗಳಿಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ತಪ್ತಮುದ್ರಾಧಾರಣೆ ನಡೆಸಿದರು.error: Content is protected !!
Scroll to Top