Wednesday, August 17, 2022
spot_img
Homeರಾಜ್ಯಸಮಾಜ - ವಿಜ್ಞಾನದಲ್ಲಿ‌ ನಾರಾಯಣ ಗುರುಗಳ ಪಠ್ಯ ಸೇರಿಸುವಂತೆ ಶಿಕ್ಷಣ ಸಚಿವರಿಗೆ ಸುನೀಲ್‌ ಕುಮಾರ್ ಮನವಿ

ಸಮಾಜ – ವಿಜ್ಞಾನದಲ್ಲಿ‌ ನಾರಾಯಣ ಗುರುಗಳ ಪಠ್ಯ ಸೇರಿಸುವಂತೆ ಶಿಕ್ಷಣ ಸಚಿವರಿಗೆ ಸುನೀಲ್‌ ಕುಮಾರ್ ಮನವಿ

ಕಾರ್ಕಳ : ಬ್ರಹ್ಮ ಶ್ರೀ ನಾರಾಯಣ ಗುರುಗಳ ಪಠ್ಯವನ್ನು ಸಮಾಜ-ವಿಜ್ಞಾನ ವಿಷಯದಲ್ಲಿ ಸೇರ್ಪಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ, ಇಂಧನ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌ ಅವರು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಸಂಸದ, ಬಿಜೆಪಿ ರಾಜ್ಯಾ‍ಧ್ಯಕ್ಷ ನಳಿನ್‌ ಕುಮಾರ್‌ ಅವರೊಂದಿಗೆ ಬಿ.ಸಿ. ನಾಗೇಶ್‌ ಅವರನ್ನು ಭೇಟಿ ಮಾಡಿದ ಸುನೀಲ್‌ ಕುಮಾರ್‌,
ಈ ಬಾರಿ ಪಠ್ಯ ಪುಸ್ತಕದಲ್ಲಿ ಬ್ರಹ್ಮಶ್ರೀ ಗುರುನಾರಾಯಣ ಗುರುಗಳ ಕುರಿತಂತೆ ಅಳವಡಿಸಲಾಗಿದ್ದ ವಿಷಯಗಳ ಬಗ್ಗೆ ಗೊಂದಲ ನಿರ್ಮಾಣವಾಗಿದೆ. ಈ ಕುರಿತು ಹಲವರು ನಮ್ಮ ಬಳಿ ಚರ್ಚೆ ಮಾಡಿರುತ್ತಾರೆ. ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿಷಯಗಳು ಈ ಹಿಂದೆ ಸಮಾಜ ವಿಜ್ಞಾನ ವಿಷಯದಲ್ಲಿತ್ತು. ಈ ವರ್ಷದಿಂದ ಪಠ್ಯವನ್ನು ಕನ್ನಡ ವಿಷಯಕ್ಕೆ ವರ್ಗಾಯಿಸಲಾಗಿದೆ. ಕನ್ನಡ ವಿಷಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯ ಸೇರಿಸಿರುವುದರ ಬಗ್ಗೆ ಹಲವರಿಂದ ಆಕ್ಷೇಪಣೆ ವ್ಯಕ್ತವಾಗುತ್ತಿವೆ. ಕನ್ನಡದ ಬದಲು ಸಮಾಜ ವಿಜ್ಞಾನದಲ್ಲಿದ್ದರೆ ಎಲ್ಲ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದಕ್ಕೆ ಸಾಧ್ಯವಾಗುತ್ತದೆ ಮತ್ತು ಅದು ಸರ್ವ ಸಮ್ಮತವಾಗಿರುತ್ತದೆ ಎಂಬುದು ವಿವಿಧ ಸಂಘಟನೆಗಳ ಹಾಗೂ ರಾಜ್ಯದ ಗಣ್ಯರ ಅಭಿಪ್ರಾಯ. ಕನ್ನಡ ಭಾಷಾ ವಿಷಯವನ್ನು ಎಲ್ಲರೂ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ಬೇರೆ ಭಾಷ ಮಾಧ್ಯಮದ ವಿದ್ಯಾರ್ಥಿಗಳು, ನಾರಾಯಣ ಗುರುಗಳ ಪಠ್ಯದಿಂದ ವಂಚಿತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಭಾಷ ಮಾಧ್ಯಮದ ವಿದ್ಯಾರ್ಥಿಗಳಿಗೆ ನಾರಾಯಣಗುರುಗಳ ತತ್ತ್ವ, ಆದರ್ಶಗಳು ತಿಳಿಯಬೇಕೆಂದಾದಲ್ಲಿ ಸಮಾಜ ವಿಜ್ಞಾನ ವಿಷಯಕ್ಕೆ ಸೇರಿಸುವುದು ಸೂಕ್ತವಾಗಿದೆ.
ಇದು ನಾಡಿನ ಅನೇಕ ಶೈಕ್ಷಣಿಕ ತಜ್ಞರ ಹಾಗೂ ಹಿರಿಯರ ಒತ್ತಾಸೆ ಎಂದು ಸುನೀಲ್‌ ಕುಮಾರ್‌ ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!