Saturday, October 1, 2022
spot_img
Homeಸುದ್ದಿಶಿಕ್ಷಣ ಸಚಿವರನ್ನು ವಜಾಗೊಳಿಸಲು ಪ್ರಧಾನಿಗೆ ಪತ್ರ

ಶಿಕ್ಷಣ ಸಚಿವರನ್ನು ವಜಾಗೊಳಿಸಲು ಪ್ರಧಾನಿಗೆ ಪತ್ರ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರನ್ನು ವಜಾಗೊಳಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನಗಳನ್ನು ನೀಡಬೇಕೆಂದು ಆಗ್ರಹಿಸಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸ) ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ.
ಶಿಕ್ಷಣ ಸಚಿವರಿಗೆ ಶಿಕ್ಷಣದ ಕನಿಷ್ಠ ಜ್ಞಾನವಿಲ್ಲ, ವ್ಯಾಪಾರಿ ಮನೋಭಾವದ ಅವರ ತಪ್ಪು ನಿರ್ಧಾರಗಳಿಂದಾಗಿ ಶಿಕ್ಷಣಕ್ಕೆ ಹಿನ್ನಡೆಯಾಗಿ ನಾಗರಿಕ ಸಮಾಜ ತಲೆತಗ್ಗಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ ಈ ಪತ್ರದಲ್ಲಿ ಹೇಳಲಾಗಿದೆ.
ಶಿಕ್ಷಣ ಸಚಿವರ ತಪ್ಪು ನಿರ್ಧಾರಗಳಿಗೆ ಮಕ್ಕಳ ಭವಿಷ್ಯ ಬಲಿಯಾಗುತ್ತಿದೆ.ಇದರಿಂದ ಸರಕಾರದ ವರ್ಚಸ್ಸಿಗೂ ಧಕ್ಕೆಯಾಗುತ್ತಿದೆ. ಹೀಗಾಗಿ ಶಿಕ್ಷಣ ಸಚಿವರನ್ನು ಬದಲಾಯಿಸಲು ಸರಕಾರಕ್ಕೆ ಸೂಚನೆ ಕೊಡಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಕೋವಿಡ್‌ನಿಂದ ಮಕ್ಕಳಿಗಾದ ಸಮಸ್ಯೆಗಳನ್ನು ನಿವಾರಿಸುವುದು ಬಿಟ್ಟು ಪಠ್ಯ ಪರಿಷ್ಕರಣೆಯಂಥ ಕೆಲಗಳಿಗೆ ಆದ್ಯತೆ ಕೊಡುತ್ತಿದ್ದಾರೆ. ಶೈಕ್ಷಣಿಕ ದಾಖಲಾತಿ ರೂಪಿಸದ ಪರಿಣಾಮ ಸುಮಾರು 10 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿಯುವಂತಾಗಿದೆ. ಹಿಜಾಬ್‌ ವಿವಾದವನ್ನು ಸಮರ್ಪಕವಾಗಿ ನಿಭಾಯಿಸದ ಕಾರಣ ಮಕ್ಕಳ ಮನಸ್ಸಿನಲ್ಲಿ ಸಾಮರಸ್ಯ ಭಾವ ಮತ್ತು ಸಮಬಾಳ್ವೆಯ ಕಲ್ಪನೆಗೆ ಧಕ್ಕೆಯಾಗಿದೆ ಎಂದು ರುಪ್ಸದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಈ ಪತ್ರದಲ್ಲಿ ದೂರಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!