Saturday, October 1, 2022
spot_img
Homeಸ್ಥಳೀಯ ಸುದ್ದಿಶ್ರೀ ಮಹಾಲಿಂಗೇಶ್ವರ ಯುವಕ ಮಂಡಲದ ಅಧ್ಯಕ್ಷರಾಗಿ ಪ್ರಸಾದ್‌ ದೇವಾಡಿಗ - ಮಹಿಳಾ ಮಂಡಲ ಅಧ್ಯಕ್ಷೆಯಾಗಿ ಅಮೃತಾ...

ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲದ ಅಧ್ಯಕ್ಷರಾಗಿ ಪ್ರಸಾದ್‌ ದೇವಾಡಿಗ – ಮಹಿಳಾ ಮಂಡಲ ಅಧ್ಯಕ್ಷೆಯಾಗಿ ಅಮೃತಾ ಭಾಸ್ಕರ್‌ ಶೆಟ್ಟಿ

ಕಾರ್ಕಳ : ಪತ್ತೊಂಜಿಕಟ್ಟೆ ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಪ್ರಸಾದ್ ದೇವಾಡಿಗ, ಮಹಿಳಾ ಮಂಡಲದ ಅಧ್ಯಕ್ಷೆಯಾಗಿ ಅಮೃತಾ ಭಾಸ್ಕರ್‌ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಂಘದ ಹಿರಿಯ ಸದಸ್ಯ ಗಣೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜು. 10ರಂದು ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನುಆಯ್ಕೆ ಮಾಡಲಾಯಿತು. ಯುವಕ ಮಂಡಲದ ಉಪಾಧ್ಯಕ್ಷರಾಗಿ ರಘುನಾಥ ಪೂಜಾರಿ, ಕಾಯ೯ದಶಿ೯ಯಾಗಿ ದಿನೇಶ್ ಕೊರಳಕೋಡಿ, ಜತೆ ಕಾಯ೯ದಶಿ೯- ಸಂದೇಶ್ ಕೋಟ್ಯಾನ್, ಕೋಶಾಧಿಕಾರಿ ಪ್ರಸನ್ನ ರಾವ್, ಕ್ರೀಡಾ ಕಾಯ೯ದಶಿ೯ ರಾಘವೇಂದ್ರ ಶೆಟ್ಟಿ, ಸಾಂಸ್ಕೃತಿಕ ಕಾಯ೯ದರ್ಶಿಯಾಗಿ ರಾಜೇಂದ್ರ ಆಯ್ಕೆಯಾದರು. ಲೆಕ್ಕ ಪರಿಶೋಧಕರಾಗಿ ನವೀನ್ ಎಂ. ಸುವರ್ಣರ, ಗೌರವ ಸಲಹೆಗಾರರಾಗಿ ಗಣೇಶ್ ಎಂ. ಶೆಟ್ಟಿ, ಸದಾಶಿವ ಶೆಟ್ಟಿ, ಹೆನ್ರಿ ಸಾಂತ್ ಮಯೋರ್, ನಜೀರ್ ಅಹಮ್ಮದ್, ಅಬ್ದುಲ್ ರಹೀಂ, ಮೋನಪ್ಪ ದೇವಾಡಿಗ, ಅಬ್ದುಲ್ ಕರೀಂ ಅವರರು ಆಯ್ಕೆಯಾದರು. 15 ಮಂದಿ ಸದಸ್ಯರನ್ನೊಳಗೊಂಡ ಕಾಯ೯ಕಾರಿ ಸಮಿತಿಯನ್ನು ರಚಿಸಲಾಯಿತು.
ಮಹಿಳಾ ಮಂಡಳಿ ಉಪಾಧ್ಯಕ್ಷರಾಗಿ ಜ್ಯೋತಿ ಆಚಾರ್ಯ, ಉಷಾ ಸದಾನಂದ, ಕಾಯ೯ದಶಿ೯ಯಾಗಿ ವೀಣಾ ರಾಜೇಶ್ ಭಂಡಾರಿ, ಜತೆ ಕಾಯ೯ದಶಿ೯ಯಾಗಿ ಶುಭಲಕ್ಷ್ಮೀ ಆರ್. ಬಂಗೇರ, ಕೋಶಾಧಿಕಾರಿಯಾಗಿ ಒಲಿವಿಯಾ ಡಿ’ಮೆಲ್ಲೊ, ಸಾಂಸ್ಕೃತಿಕ ಕಾಯ೯ದಶಿ೯ಯಾಗಿ ಸುಜಯ ಮೋಹನ್, ಶುಭಾ ಕಿಶೋರ್, ಕ್ರೀಡಾ ಕಾಯ೯ದಶಿ೯ಯಾಗಿ ರೇಣುಕಾ ಶೆಟ್ಟಿ, ರೂಪಾ ಶೆಟ್ಟಿ ಆಯ್ಕೆಯಾದರು. 24 ಮಂದಿ ಸದಸ್ಯರನ್ನೊಳಗೊಂಡ ಕಾಯ೯ಕಾರಿ ಸಮಿತಿಯನ್ನು ರಚಿಸಲಾಯಿತು.

LEAVE A REPLY

Please enter your comment!
Please enter your name here

Most Popular

error: Content is protected !!