ಕಾರ್ಕಳ : ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾರ್ಡ್ ಮರು ನೊಂದಾವಣೆ ಮತ್ತು ಹೊಸ ಕಾರ್ಡ್ ನೊಂದಣಿ ಮೇಳವು ಜು. 13 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ತನಕ ತಾಲೂಕು ಪಂಚಾಯತ್‌ನ ಅಂಬೇಡ್ಕರ್ ಭವನದಲ್ಲಿ ಜರುಗಲಿದೆ. ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ ಮತ್ತು ದುರ್ಬಲತೆಯ ಪಿಂಚಣಿ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ವಸತಿ ಸೌಲಭ್ಯ, ಮದುವೆ ಸಹಾಯಧನ, ಶೈಕ್ಷಣಿಕ ತರಬೇತಿ, ತಾಯಿ-ಮಗು ಸಹಾಯ ಹಸ್ತ, ಹೆರಿಗೆ ಸೌಲಭ್ಯ, ಶಿಶುಪಾಲನ ಸೌಲಭ್ಯವು ದೊರಕುವುದು. ಆಸಕ್ತ ಕಾರ್ಮಿಕರು ಆಧಾರ್ ಮತ್ತು ರೇಷನ್ ಕಾರ್ಡ್ ಪ್ರತಿ, ಅರ್ಜಿದಾರನ ಭಾವಚಿತ್ರ, ಬ್ಯಾಂಕ್ ಪುಸ್ತಕ ಪ್ರತಿ, ಅವಲಂಬಿತರ ಆಧಾರ್ ಪ್ರತಿ ಮತ್ತು ಅರ್ಜಿಯ ಮೇಲೆ ಗುತ್ತಿಗೆದಾರರ ಸೀಲ್ ಮತ್ತು ಸಹಿ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ 8618103081 ನಂಬರನ್ನು ಸಂಪರ್ಕಿಸಬಹುದಾಗಿದೆ.