Wednesday, August 17, 2022
spot_img
Homeಸುದ್ದಿಕೇರಳದ ಮಾಲ್‌ನಲ್ಲಿ ಮಧ್ಯರಾತ್ರಿ ಖರೀದಿಗಾಗಿ ಮುಗಿಬಿದ್ದ ಜನ

ಕೇರಳದ ಮಾಲ್‌ನಲ್ಲಿ ಮಧ್ಯರಾತ್ರಿ ಖರೀದಿಗಾಗಿ ಮುಗಿಬಿದ್ದ ಜನ

ತಿರುವನಂತಪುರ: ಪುಕ್ಕಟೆ ಅಥವಾ ಭಾರಿ ರಿಯಾಯಿತಿ ಬೆಲೆಯಲ್ಲಿ ಏನಾದರೂ ಸಿಗುವುದಾದರೆ ಜನರು ಮಧ್ಯರಾತ್ರಿ ನಿದ್ದೆಗೆಟ್ಟು ಬೇಕಾದರೆ ಮಳಿಗೆಗಳಿಗೆ ಧಾವಿಸಲು ತಯಾರಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ. ಕೇರಳದ ಲುಲು ಮಾಲ್‌ ಮಧ್ಯರಾತ್ರಿಯ ಖರೀದಿಗೆ ಶೇ.50 ರಿಯಾಯಿತಿ ಇದೆ ಎಂದು ಘೋಷಿಸಿದಾಗ ಎರಡು ಮಾಲ್ ಗಳಲ್ಲಿ ಯಾವ ಪರಿ ನೂಕುನುಗ್ಗಲು ಉಂಟಾಯಿತು ಎಂದರೆ ಜನರನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನೇ ಕರೆಸಬೇಕಾಯಿತಂತೆ.
ಬಕ್ರೀದ್‌ ಹಬ್ಬದಂಗವಾಗಿ ಜು.6 ಮಧ್ಯರಾತ್ರಿಯಿಂದ ಜು.7 ಬೆಳಗ್ಗಿನ 6 ಗಂಟೆ ತನಕ ಕೊಚ್ಚಿ ಮತ್ತು ತಿರುವನಂತಪುರದ ಲುಲು ಮಾಲ್‌ನಲ್ಲಿ ಶೇ.50 ಡಿಸ್ಕೌಂಟ್‌ ಘೋಷಿಸಲಾಗಿತ್ತು. ಅರ್ಧ ಬೆಲೆಯ ವಸ್ತುಗಳನ್ನು ಖರೀದಿಸಲು ಮಹಿಳೆಯರು ಮಕ್ಕಳೆನ್ನದೆ ಜನರು ನಡುರಾತ್ರಿಯೇ ಧಾವಿಸಿದ್ದರು. ಎರಡು ಮಳಿಗೆಗಳಲ್ಲಿ ಇದ್ದ ನೂಕುನುಗ್ಗಲಿನ ವೀಡಿಯೊಗಳನ್ನು ಮಾಲ್‌ನವರೇ ಹಂಚಿಕೊಂಡು ಗ್ರಾಹಕರ ದಟ್ಟಣೆ ನಾವು
ನಿರೀಕ್ಷಿಸಿದ್ದಂಕ್ಕಿತಲೂ ಹೆಚ್ಚು ಇತ್ತು ಎಂದು ಹೇಳಿಕೊಂಡಿದ್ದಾರೆ. ಜನರು ಖರೀದಿ ಉತ್ಸಾಹ ಎಷ್ಟಿತ್ತು ಎಂದರೆ ಲಿಫ್ಟ್‌, ಎಸ್ಕಲೇಟರ್‌ ಅತಿ ಭಾರಕ್ಕೆ ಕುಸಿಯಿವ ಭೀತಿಯಿದ್ದರೂ ಯಾರೂ ಅದನ್ನು ಲೆಕ್ಕಿಸುತ್ತಿರಲಿಲ್ಲ. ನಡುರಾತ್ರಿ ಹೀಗೆ ಜನರನ್ನು ಹುಚ್ಚುಗಟ್ಟಿಸಿದ ಲುಲು ಮಾಲ್‌ ನಡೆಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!