Sunday, October 2, 2022
spot_img
Homeಸ್ಥಳೀಯ ಸುದ್ದಿಬೋಳ ದೇವಸ್ಥಾನದ ಬಾಗಿಲು ಒಡೆದು ಪಂಚಲೋಹದ ಮೂರ್ತಿ ಕಳವು

ಬೋಳ ದೇವಸ್ಥಾನದ ಬಾಗಿಲು ಒಡೆದು ಪಂಚಲೋಹದ ಮೂರ್ತಿ ಕಳವು

ಕಾರ್ಕಳ : ಕಾರ್ಕಳ : ಬೋಳ ಗ್ರಾಮದ ಬೋಳ ಕೋಡಿ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನದ ಬಾಗಿಲಿನ ಬೀಗ ಮುರಿದು ದೇವರ ಪೀಠದಲ್ಲಿ ಇರಿಸಿದ್ದ ಪುರಾತನ ಪಂಚಲೋಹದ ಬಲಿ ಮೂರ್ತಿ ಕಳವು ಮಾಡಲಾಗಿದೆ. ಅದರೊಂದಿಗೆ ಗಣಪತಿ ಗುಡಿಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಅದರೊಳಗೆ ಇರಿಸಿದ್ದ 5 ಸಾವಿರ ರೂ. ಮೌಲ್ಯದ ಗಣಪತಿ ಬೆಳ್ಳಿಯ ಮುಖವಾಡ, ತೀರ್ಥ ಮಂಟಪದ ಬಳಿ ಇರಿಸಿದ್ದ ಕಬ್ಬಿಣದ ಕಾಣಿಕೆ ಡಬ್ಬಿಯ ಬಾಗಿಲನ್ನು ಯಾವುದೋ ಸಲಕರಣೆಯಿಂದ ಮೀಟಿ ತೆರೆದು, ಅದರೊಳಗಿದ್ದ ನಗದು ಅಂದಾಜು 45ರಿಂದ 50 ಸಾವಿರ ರೂ. (ನೋಟುಗಳು ಮಾತ್ರ) ಹಾಗೂ ದೇವಸ್ಥಾನ ಕಚೇರಿಯ ಒಳಗೆ ಅಳವಡಿಸಿದ್ದ 9 ಸಾವಿರ ರೂ. ಮೌಲ್ಯದ ಡಿವಿಆರ್‌ ಕಳವಾಗಿದೆ. ಈ ಬಗ್ಗೆ ಬೋಳಕೋಡಿ ಶ್ರೀನಿವಾಸ ಭಟ್ ಟ್ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!