59 ವಿದ್ಯಾರ್ಥಿಗಳಿಗೆ 90ಕ್ಕಿಂತ ಅಧಿಕ ಪರ್ಸಂಟೈಲ್
ಭೌತಶಾಸ್ತ್ರದಲ್ಲಿ ಅಖಿಲ್ ವಾಗ್ಲೆ 100 ಪರ್ಸಂಟೈಲ್
ಕಾರ್ಕಳ : ಇಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ ಮೊದಲ ಹಂತದ ಪರೀಕ್ಷೆಯಲ್ಲಿ ಗಣಿತನಗರದ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅಖಿಲ್‍ವಾಗ್ಲೆ ಭೌತಶಾಸ್ತ್ರದಲ್ಲಿ 100ಕ್ಕೆ 100 ಪರ್ಸಂಟೈಲ್‌ನೊಂದಿಗೆ ಒಟ್ಟು 99.4554703 ಪರ್ಸಂಟೈಲ್ ದಾಖಲಿಸಿದ್ದಾರೆ. ಚಿರಾಗ್ ಎಸ್. 99.3526192, ಸ್ತುತಿ ಎಸ್. 99.1515686, ಆರ್ಯ ಪಿ. ಶೆಟ್ಟಿ 99.1010784, ಪ್ರಜ್ವಲ್ ಜೆ. ಪಟ್ಗರ್ 98.9625324, ಆದರ್ಶ್‍ತಟಾವಟಿ 98.4230842, ಸಾತ್ವಿಕ್‍ಚಂದ್ರ 98.3865636, ಕೆ. ಶಶಾಂಕ ಕಲ್ಕುರ 97.8016312, ಶಶಾಂಕ್ ಆರ್. ಆಚಾರ್ಯ 97.4484435, ಮೊಹಮ್ಮದ್ ರಿಹಾನ್ ವಾಲಿಕಾರ್ 97.2772124, ಕಾರ್ತಿಕ್ ಬ್ಯಾಕುಡ್ 97.0428523 ಪರ್ಸಟೈಲ್‍ನೊಂದಿಗೆ ಉತ್ತಮ ಸಾಧನೆಗೈದ್ದಾರೆ.ಒಟ್ಟು 59 ವಿದ್ಯಾರ್ಥಿಗಳಿಗೆ 90 ಪರ್ಸೆಂಟೈಲ್ ಗಿಂತ ಅಧಿಕ ಪರ್ಸಂಟೈಲ್ ಲಭಿಸಿದೆ.
4 ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಅಧಿಕ ಪರ್ಸಂಟೈಲ್, 7 ವಿದ್ಯಾರ್ಥಿಗಳು 98 ಪರ್ಸೆಂಟೈಲ್ ಗಿಂತ ಅಧಿಕ, 11 ವಿದ್ಯಾರ್ಥಿಗಳು 97ಗಿಂತ ಅಧಿಕ, 20 ವಿದ್ಯಾರ್ಥಿಗಳು 96 ಕ್ಕಿಂತ ಅಧಿಕ, 28 ವಿದ್ಯಾರ್ಥಿಗಳು 95 ಪರ್ಸೆಂಟೈಲ್‌ಗಿಂತ ಅಧಿಕ ಪರ್ಸೆಂಟೈಲ್ ಪಡೆದಿರುತ್ತಾರೆ. 59 ವಿದ್ಯಾರ್ಥಿಗಳಿಗೆ 90 ಪರ್ಸೆಂಟೈಲ್‌ಗಿಂತ ಅಧಿಕ ಪರ್ಸಂಟೈಲ್ ಸಂಪಾದಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿ, ಪ್ರಾಂಶುಪಾಲರು, ಉಪನ್ಯಾಸಕ ಬಳಗವನ್ನು ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ.