Saturday, October 1, 2022
spot_img
Homeಸುದ್ದಿಕಾಂಗ್ರೆಸ್‌ ಶಾಸಕರು ಟೆಂಟ್‌ ಸಮೇತ ಬರಲಿದ್ದಾರೆ: ಸಿ.ಟಿ.ರವಿ

ಕಾಂಗ್ರೆಸ್‌ ಶಾಸಕರು ಟೆಂಟ್‌ ಸಮೇತ ಬರಲಿದ್ದಾರೆ: ಸಿ.ಟಿ.ರವಿ

ಬೆಂಗಳೂರು: ಕಾಂಗ್ರೆಸ್ಸಿನ ಹಲವು ಶಾಸಕರು ಟೆಂಟ್‌ ಸಮೇತ ಗಂಟುಮೂಟೆ ಕಟ್ಟಿಕೊಂಡು ಬಿಜೆಪಿಗೆ ಬರಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಗೋವಾ ಕಾಂಗ್ರೆಸ್ಸಿನ ಭಿನ್ನಮತದ ಕುರಿತು ಮಾತನಾಡಿದ ಅವರು, ಅಲ್ಲಿನ 12 ಶಾಸಕರು ಕಾಂಗ್ರೆಸ್ಸಿನಿಂದ ಹೊರಬರಲು ತಯಾರಾಗಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಹಲವು ಕಾಂಗ್ರೆಸ್‌ ಶಾಸಕರು ಟೆಂಟ್‌ ಸಮೇತ ಬಿಜೆಪಿಗೆ ಬರಲಿದ್ದಾರೆ.ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಗೂಟ ಇಟ್ಟುಕೊಂಡು ಬಡಿದಾಡಬೇಕಷ್ಟೆ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಅಧಿಕಾರದ ಕಚ್ಚಾಟ ಮುಗಿಯುವಂಥದ್ದಲ್ಲ, ಹೀಗಾಗಿ ಕಾಂಗ್ರೆಸ್‌ ಶಾಸಕರು ಭ್ರಮೆನಿರಸನಗೊಂಡು ಬೇರೆ ಪಕ್ಷಗಳತ್ತ ಹೋಗುತ್ತಿದ್ದಾರೆ. ಆದರೂ ಸಿದ್ದರಾಮಯ್ಯ ಮತ್ತು ಡಿಕೆಶಿ ತಿರುಕನ ಕನಸು ಕಾಣುತ್ತಿದ್ದಾರೆ ಎಂದಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!